Select Your Language

Notifications

webdunia
webdunia
webdunia
webdunia

ಕಾರಿನ ಸ್ಫೋಟದಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದ ರಷ್ಯಾದ ಸಂಸದೆ, ಪತಿ ಸಾವು

ಕಾರಿನ ಸ್ಫೋಟದಲ್ಲಿ ಅರೆನಗ್ನ ಸ್ಥಿತಿಯಲ್ಲಿದ್ದ  ರಷ್ಯಾದ ಸಂಸದೆ, ಪತಿ ಸಾವು
ಲಂಡನ್ , ಭಾನುವಾರ, 29 ನವೆಂಬರ್ 2015 (15:42 IST)
30  ವರ್ಷ ವಯಸ್ಸಿನ ರಷ್ಯಾದ ಮಹಿಳಾ ರಾಜಕಾರಣಿ ಮತ್ತು ಅವರ ಪತಿ ಕುಳಿತಿದ್ದ ಕಾರು ಸ್ಫೋಟಿಸಿ  ಇಬ್ಬರೂ ಸಾವನ್ನಪ್ಪಿದ್ದಾರೆ.  ವ್ಲಾಡಿಮಿರ್ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷದ ಸದಸ್ಯೆಯಾಗಿರುವ ಓಕ್ಸಾನಾ ಬಾಬ್ರೋವ್ಸ್‌ಕಾ ಮತ್ತು ನಿಕಿತಾ ಬಾಬ್ರೋವ್‌ಸ್ಕಿ ಅವರ ಅರೆನಗ್ನ ಸ್ಥಿತಿಯಲ್ಲಿದ್ದ ದೇಹಗಳು ಟೊಯೊಟಾ ಕಾರಿನ ಹಿಂಭಾಗದ ಸೀಟಿನಲ್ಲಿ ಪತ್ತೆಯಾಗಿದೆ.
 
 ಸೈಬೀರಿಯಾದ ನೊವೋಸಿಬಿರ್ಸ್ಕ್‌ನಲ್ಲಿ ಸಂಭವಿಸಿದ ಸ್ಫೋಟದ ಸಂದರ್ಭದಲ್ಲಿ  ದಂಪತಿ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿದ್ದರು ಎಂದು ಶುಕ್ರವಾರ ರಾತ್ರಿ ಊಹಾಪೋಹ ಹರಡಿದೆ.  ಸಂಸದೆಯ ಪತಿ ನಿಕಿಟಾನೇ ಕಾರಿನಲ್ಲಿ ಗ್ರೆನೇಡ್ ಇಟ್ಟು ಸ್ಫೋಟಿಸಿರಬಹುದು ಎಂಬ ಸಂಶಯವೂ ಆವರಿಸಿದೆ.

ದಂಪತಿ ನಡುವೆ ಕೌಟುಂಬಿಕ ವಿರಸವಿದ್ದು, ಸಂಸದೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಖಚಿತಪಡಿಸದ ವರದಿಗಳು ಹೇಳಿವೆ. ಬೊಬ್ರೋವ್‌ಸ್ಕಿ ನಿರುದ್ಯೋಗಿಯಾಗಿದ್ದು, ಅವರ ಪತ್ನಿಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರಿಂದ ಅವರಿಬ್ಬರ ಸಂಬಂಧ ಹಳಸಿತ್ತು. ದಂಪತಿಗೆ ನಾಲ್ಕು ವರ್ಷ ಮಗಳು ಕೂಡ ಇದ್ದಳು. 

Share this Story:

Follow Webdunia kannada