Select Your Language

Notifications

webdunia
webdunia
webdunia
webdunia

ರಷ್ಯಾ ವಸತಿನಿಲಯದಲ್ಲಿ ಮಹಾರಾಷ್ಟ್ರದ ಇಬ್ಬರು ವಿದ್ಯಾರ್ಥಿನಿಯರ ಶವ

ರಷ್ಯಾ ವಸತಿನಿಲಯದಲ್ಲಿ ಮಹಾರಾಷ್ಟ್ರದ ಇಬ್ಬರು ವಿದ್ಯಾರ್ಥಿನಿಯರ ಶವ
ಮಾಸ್ಕೊ , ಬುಧವಾರ, 17 ಫೆಬ್ರವರಿ 2016 (16:30 IST)
ರಷ್ಯಾದ  ವೈದ್ಯಕೀಯ ವಸತಿ ಗೃಹದಲ್ಲಿ ಅಗ್ನಿ ದುರಂತ ಸಂಭವಿಸಿದ 36 ಗಂಟೆಗಳ ಬಳಿಕ ಇಬ್ಬರು ವಿದ್ಯಾರ್ಥಿನಿಯರ ಶವಗಳು ಪತ್ತೆಯಾಗಿದ್ದು, ಇಬ್ಬರು ವಿದ್ಯಾರ್ಥಿನಿಯರನ್ನು ಮಹಾರಾಷ್ಟ್ರದವರೆಂದು ಭಾರತೀಯ ರಾಜತಾಂತ್ರಿಕರು ಗುರುತಿಸಿದ್ದಾರೆಂದು ಮೂಲಗಳು ಹೇಳಿವೆ.  ಭಾನುವಾರ ಬೆಳಿಗ್ಗೆ ವಸತಿ ಗೃಹದಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸತ್ತಿದ್ದರು.  6 ಮಹಡಿಗಳ ವೈದ್ಯಕೀಯ ವಿವಿಯ ವಸತಿನಿಲಯವನ್ನು ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು.
 
ವಸತಿಗೃಹದಿಂದ ಸುಮಾರು 60 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದರೂ ನಾಲ್ಕನೇ ಮಹಡಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಸತ್ತುಬಿದ್ದಿರುವುದು ಪತ್ತೆಯಾಗಿತ್ತು.  ಮಾಸ್ಕೋಗೆ 400 ಕಿಮೀ ದೂರದ ಸ್ಮೋಲೆನ್ಸ್‌ಕ್ ವೈದ್ಯಕೀಯ ವಿವಿಯಲ್ಲಿ ವಿದ್ಯಾರ್ಥಿಗಳು ಓದುತ್ತಿದ್ದರು.
 
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ರಾತ್ರಿ ಈ ಘಟನೆಯನ್ನು ದೃಢಪಡಿಸಿದ್ದು, ಅವರ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಮುಂಬೈಗೆ ದೇಹಗಳನ್ನು ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
 
 

Share this Story:

Follow Webdunia kannada