Webdunia - Bharat's app for daily news and videos

Install App

ಬ್ರಿಟನ್ ಅರಮನೆಗೆ ಬಂದ ರಾಜಕುಮಾರಿ

Webdunia
ಭಾನುವಾರ, 3 ಮೇ 2015 (11:21 IST)
ಬ್ರಿಟನ್ ಅರಮನೆಗೆ ಮತ್ತೊಬ್ಬ ಹೊಸ ಅತಿಥಿಯ ಆಗಮನವಾಗಿದೆ. ಪ್ರಿನ್ಸ್  ವಿಲಿಯಮ್ ಅವರ ಪತ್ನಿ  ಕೇಟ್ ಮಿಡ್ಲೆಟನ್ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ.

 
ಕೇಟ್ ಅವರಿಗೆ ಶನಿವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಹೆರಿಗೆ ನೋವು ಕಂಡು ಬಂದಿದ್ದು ಅವರನ್ನು ಲಂಡನ್‌‌‌‌‌‌‌‌‌‌‌‌‌‌‌‌‌‌‌‌‌‌‌‌ನ ಸೈಂಟ್ ಮೇರಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ತೆಗೆ ದಾಖಲಾದ 3 ಗಂಟೆಯ ನಂತರ 8.34ಕ್ಕೆ( ಅಂತರಾಷ್ಟ್ರೀಯ ಸಮಯ 7.34) ಅವರು ಹೆಣ್ಣು ಮಗುವೊಂದಕ್ಕೆ  ಜನ್ಮ ನೀಡಿದ್ದಾರೆ. ಮಗು 3.7ಕೆಜಿ ತೂಕ ಹೊಂದಿದೆ. ಇದು ಪ್ರಿನ್ಸ್, ಕೇಟ್ ದಂಪತಿಗಳ ಎರಡನೇ ಮಗುವಾಗಿದ್ದು, ಅವರಿಗೆ ಈಗಾಗಲೇ 18 ತಿಂಗಳ ಗಂಡು ಮಗುವಿದೆ. ಕೇಟ್ ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ಅರಮನೆ ಆವರಣದಲ್ಲಿ ಸೇರಿದ್ದ ಜನರು ಹೆಣ್ಣು ಮಗುವಾದ ಕುರಿತು ಘೋಷಣೆಯಾಗುತ್ತಿದ್ದಂತೆಯೇ ಸಿಹಿ ತಿಂಡಿ ಹಂಚಿಕೊಂಡು ಸಂಭ್ರಮನ್ನಾಚರಿಸಿದರು. ಮಗು ಜನಿಸಿದ ನಂತರ 12 ಗಂಟೆಗಳ ಕಾಲ ಮಾತ್ರ ಆಸ್ಪತ್ರೆಯಲ್ಲಿದ್ದ ಕೇಟ್ ನಂತರ ಅರಮನೆಗೆ ಮರಳಿದ್ದರು.
 
ಮಗುವಿಗೆ ಏನು ಹೆಸರಿಡುತ್ತಾರೆ ಎಂಬುದರ ಕುರಿತು ಲಂಡನ್‌ನಾದ್ಯಂತ ಬೆಟ್ಟಿಂಗ್ ಪ್ರಾರಂಭವಾಗಿದ್ದು. ಆಲಿಸ್ ಮತ್ತು ಚಾರ್ಲೆಟ್ ಬುಕ್ಕಿಗಳ ಅಚ್ಚುಮೆಚ್ಚಿನ ಹೆಸರುಗಳಾಗಿವೆ.
 
ಎಂಟು ವರ್ಷಗಳ ಕಾಲ ಪರಷ್ಟರ ಪ್ರೀತಿಸದ್ದ ಬ್ರಿಟನ್ ರಾಜಕುಮಾರ ವಿಲಿಯಮ್ ಹಾಗೂ ಕೇಟ್ ಕ್ಯಾಥರೀನ್ ಎಪ್ರಿಲ್ 2011ರಲ್ಲಿ ಉಂಗುರ ಬದಲಾಯಿಕೊಂಡಿದ್ದರು. ಶತಮಾನದ ಈ ಅದ್ದೂರಿ ವಿವಾಹವನ್ನು ಜಗತ್ತಿನಾದ್ಯಂತ ಟಿವಿ ಪರದೆಯ ಮೂಲಕ ಕೋಟ್ಯಂತರ ಜನರು ವೀಕ್ಷಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments