Webdunia - Bharat's app for daily news and videos

Install App

ಪಬ್‌ ಜಿ ಪ್ರಿಯರೇ ಎಚ್ಚರ..! ಮನೆಯವರನ್ನೇ ಗುಂಡಿಕ್ಕಿ ಕೊಂದ ಬಾಲಕ!

Webdunia
ಶನಿವಾರ, 29 ಜನವರಿ 2022 (07:33 IST)
ಲಾಹೋರ್ : ಪಬ್‌ ಜಿ ವ್ಯಸನಿಯಾಗಿದ್ದ 14 ವರ್ಷದ ಬಾಲಕನೊಬ್ಬ ತನ್ನ ಕುಟುಂಬದವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ದಾರುಣ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
 
ನಹಿದ್ ಮುಬಾರಕ್ (45) ಹಾಗೂ ಆಕೆಯ ಮಗ ತೈಮುರ್, ಇಬ್ಬರು ಹೆಣ್ಣುಮಕ್ಕಳು ಗುಂಡೇಟಿಗೆ ಬಲಿಯಾಗಿದ್ದಾರೆ. ಪಬ್‌ಜಿ ವ್ಯಸನದಿಂದಾಗಿ ತನ್ನ ಕುಟುಂಬದವರನ್ನೇ ಹತ್ಯೆ ಮಾಡಿದ ಬಾಲಕ ಈಗ ಪೊಲೀಸರ ವಶದಲ್ಲಿದ್ದಾನೆ. 

ಪಬ್‌ಜಿ ವ್ಯಸನಿಯಾಗಿದ್ದ ಹುಡುಗ ತನ್ನ ಆಟದ ಪ್ರಭಾವದಿಂದ ತಾಯಿ ಮತ್ತು ಒಡಹುಟ್ಟಿದವರನ್ನು ಕೊಂದಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್ಲೈನ್ ಆಟದಲ್ಲೇ ಕಳೆಯುತ್ತಿದ್ದ ಬಾಲಕ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಹಿದ್ ವಿಚ್ಛೇದಿತೆಯಾಗಿದ್ದು, ಮಗ ಓದಿನ ಕಡೆ ಗಮನಹರಿಸದೇ ಇರುವುದು ಮತ್ತು ಪಬ್ಜಿ ಆಟದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದ ಬಗ್ಗೆ ಆತನನ್ನು ಸದಾ ಬೈಯುತ್ತಿದ್ದರು. ಘಟನೆ ದಿನ ತಾಯಿ, ಮಗನನ್ನು ಗದರಿಸಿದ್ದಾರೆ. ನಂತರ ಬಾಲಕ ತನ್ನ ತಾಯಿಯ ಪಿಸ್ತೂಲ್ ಅನ್ನು ಕಬೋರ್ಡ್ನಿಂದ ಹೊರತೆಗೆದುಕೊಂಡಿದ್ದಾನೆ. ತಾಯಿ ಮತ್ತು ಸಹೋದರ, ಸಹೋದರಿಯರು ನಿದ್ರೆಯಲ್ಲಿದ್ದ ವೇಳೆ ಪಿಸ್ತೂಲ್ನಿಂದ ಗುಂಡಿ ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments