ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಯೋಜಿತ ರ್‍ಯಾಲಿಗೂ ಮುಂಚಿತವಾಗಿ ಮಿಲಿಟರಿ ಅಲರ್ಟ್ ಘೋಷಿಸಿದ್ದು ಶ್ರೀಲಂಕಾದ ರಾಜಧಾನಿಯಾದ್ಯಂತ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಗಿದೆ.
ಕೊಲಂಬೊ ಮತ್ತು ಅದರ ಉಪನಗರಗಳು ಮುಂದಿನ ಸೂಚನೆ ಬರುವವರೆಗೆ ಕರ್ಫ್ಯೂ ಅಡಿಯಲ್ಲಿ ಇರುತ್ತವೆ. ಹೀಗಾಗಿ ನಿವಾಸಿಗಳು ಮನೆಯೊಳಗೆ ಇರುವಂತೆ ಪೊಲೀಸ್ ಮುಖ್ಯಸ್ಥ ಚಂದನಾ ವಿಕ್ರಮರತ್ನೆ ತಿಳಿಸಿದ್ದಾರೆ. ದೇಶದ ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ರಾಜಪಕ್ಸೆ ಅವರನ್ನು ತೊರೆಯುವಂತೆ ಒತ್ತಡ ಹೇರಲು ಶನಿವಾರದ ರ್ಯಾಲಿಗೂ ಮುಂಚಿತವಾಗಿ ಸಾವಿರಾರು ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಶುಕ್ರವಾರ ರಾಜಧಾನಿಗೆ ಸೇರಿದಿದ್ದರಿಂದ ಈ ಆದೇಶ ಬಂದಿದೆ.
ದ್ವೀಪ ರಾಷ್ಟ್ರ ಆರ್ಥಿಕ ಸಂಕಷ್ಟದಲ್ಲಿದ್ದು ಅಗತ್ಯ ವಸ್ತುಗಳ ಕೊರತೆಯಿಂದ ಬಳಲುತ್ತಿದೆ. 22 ಮಿಲಿಯನ್ ಜನರು ವರ್ಷದ ಆರಂಭದಿಂದಲೂ ಹಣದುಬ್ಬರವನ್ನು ಸಹಿಸಿಕೊಂಡಿದ್ದಾರೆ. ಆರ್ಥಿಕ ದುರುಪಯೋಗಕ್ಕಾಗಿ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಲು ಪ್ರತಿಭಟನಾಕಾರರು ತಿಂಗಳಿನಿಂದ ರಾಜಪಕ್ಸೆ ಅವರ ಕೊಲಂಬೊ ಕಚೇರಿಯ ಹೊರಗೆ ಬೀಡುಬಿಟ್ಟಿದ್ದಾರೆ.