Webdunia - Bharat's app for daily news and videos

Install App

ಪೋಲೆಂಡ್ ನಲ್ಲಿ ವಿಶೇಷ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ನೋಡಲು ಜನರ ದಂಡು: ಏನಿದರ ವಿಶೇಷತೆ

Krishnaveni K
ಗುರುವಾರ, 22 ಆಗಸ್ಟ್ 2024 (10:35 IST)
Photo Credit: Narendra
ಪೋಲೆಂಡ್ : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪೋಲೆಂಡ್ ನ ವಿಶೇಷ ಪ್ರದೇಶವೊಂದಕ್ಕೆ ಭೇಟಿ ನೀಡಿದ್ದು, ಈ ವೇಳೆ ಅವರನ್ನು ನೋಡಲು ಜನರ ದಂಡೇ ಇತ್ತು. ಪ್ರಧಾನಿ ಭೇಟಿ ನೀಡಿರುವ ಸ್ಥಳದ ವಿಶೇಷತೆ ಏನು ಎಂದು ಇಲ್ಲಿ ನೋಡಿ.
 
ಎರಡು ದಿನಗಳ ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಲ್ಲಿನ ಮಹಾರಾಜ ಜಾಮ್ ಸಾಹೇಬ್ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಈ  ವೇಳೆ ಸಾಕಷ್ಟು ಜನ ಅಲ್ಲಿ ಭಾರತೀಯ ಪ್ರಧಾನಿಯನ್ನು ನೋಡಲು ನೆರೆದಿದ್ದರು. ಬಹುತೇಕ ಅಲ್ಲಿ ನೆಲೆಸಿರುವ ಭಾರತೀಯರೇ ಭಾರತದ ಧ್ವಜ ಹಿಡಿದುಕೊಂಡು ಮೋದಿಗೆ ಸ್ವಾಗತ ಕೋರಿದ್ದಾರೆ.

ಜಾಮ್ ಸಾಹೇಬ್ ಸಾವಿರಾರು ಅನಾಥ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಸಲಹಿದ್ದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪ್ರಾಣ ಭೀತಿಯಲ್ಲಿದ್ದ, ಅನಾಥರಾಗಿದ್ದ ಅನೇಕ ಯಹೂದಿ ಮಕ್ಕಳನ್ನು ಪೋಲೆಂಡ್ ನಿಂದ ಭಾರತಕ್ಕೆ ಕಳುಹಿಸಿಕೊಡುವ ಮೂಲಕ ಸಾವಿರಾರು ಮಕ್ಕಳ ಪ್ರಾಣ ಕಾಪಾಡಿದ್ದರು. ಅಲ್ಲದೆ, ಅವರನ್ನು ಸ್ವಂತ ಮಕ್ಕಳಂತೆ ಸಲಹಿದ್ದರು.

ಪೋಲೆಂಡ್ ಗೆ ಕಾಲಿಟ್ಟ ಬೆನ್ನಲ್ಲೇ ಅವರು ನವನಗರದ ಜಾಮ್ ಸಾಹೇಬ್ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಈ ಸ್ಮಾರಕಕ್ಕೂ ಗುಜರಾತ್ ಗೂ ವಿಶೇಷ ನಂಟಿದೆ. ವಾರ್ಸಾದ ನವನಗರದಲ್ಲಿ ನಿರ್ಮಿಸಲಾಗಿರುವ ಜಾಮ್ ಸಾಹೇಬ್ ಸ್ಮಾರಕವನ್ನು ಗುಜರಾತ್ ನ ನವನಗರದ ಮಾಜಿ ಮಹಾರಾಜ ಜಾಮ್ ಸಾಹೇಬ ದಿಗ್ವಿಜಯ್ ಸಿನ್ಹಜಿ ಅವರಗೆ ಸಮರ್ಪಿಸಲಾಗಿದೆ. ಅವರ ಗೌರವಾರ್ಥ ಈ ಸ್ಮಾರಕಕ್ಕೆ ಜಾಮ್ ಸಾಹೇಬ್ ಸ್ಮಾರಕ ಎಂದು ಹೆಸರಿಡಲಾಗಿದೆ.

80 ವರ್ಷಗಳ ಹಿಂದೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅನಾಥರಾದ ಸಾವಿರಾರು ಯಹೂದಿ ಮಕ್ಕಳನ್ನು ಜಾಮ್ ಸಾಹೇಬ್ ಸೈಬೀರಿಯಾದಿಂದ ಭಾರತಕ್ಕೆ ಕರೆತಂದರು. ಅವರನ್ನು ತಮ್ಮ ಅರಮನೆಯಲ್ಲೇ ಸಲಹಿದರು. ಈ ಮಕ್ಕಳನ್ನು ಬಳಿಕ  ಪೋಲೆಂಡ್ ನಿಂದ ಸೋವಿಯತ್ ಒಕ್ಕೂಟವು ಸೈಬೀರಿಯಾದ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಿತು. ಆಗಲೂ ಮಹಾರಾಜ ಮಕ್ಕಳನ್ನು ಭೇಟಿಯಾಗಲು ಹೋಗುತ್ತಿದ್ದರು. ಜಾಮ್ ಸಾಹೇಬ ಎಂದರೆ ವಾರ್ಸಾ ಜನರಿಗೆ ಈಗಲೂ ಅಷ್ಟೇ ಗೌರವವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments