Select Your Language

Notifications

webdunia
webdunia
webdunia
webdunia

ಬ್ರೆಜಿಲ್ ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನ ಅಪಘಾತ

ಬ್ರೆಜಿಲ್ ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನ ಅಪಘಾತ
ಬಾಗೋಟಾ , ಮಂಗಳವಾರ, 29 ನವೆಂಬರ್ 2016 (11:52 IST)
ಆಘಾತಕಾರಿ ಘಟನೆಯೊಂದರಲ್ಲಿ ಫುಟ್ಬಾಲ್ ತಂಡವನ್ನು ಕರೆದೊಯ್ಯುತ್ತಿದ್ದ ಬ್ರೆಜಿಲ್ ವಿಮಾನವೊಂದು ಕೊಲಂಬಿಯಾದ ಬಳಿ ಅಪಘಾತಕ್ಕೀಡಾಗಿದೆ.
 
ಬ್ರೆಜಿಲ್‌ನ ಚಾಪ್‌ಕೊಯೆನ್ಸ್ ರಿಯಲ್ ಫುಟ್ಬಾಲ್ ತಂಡದ ಆಟಗಾರರನ್ನು ಕರೆದೊಯ್ಯುವಾಗ ಸಿಪಿ 2933 ಸಂಖ್ಯೆಯ ವಿಮಾನ ಅಪಘಾತಕ್ಕೊಳಗಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
 
ವಿಮಾನ ಅಪಘಾತದಲ್ಲಿ ಕೆಲವರು ಬದುಕುಳಿದರುವ ಮಾಹಿತಿಗಳು ಲಭಿಸಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ಜೊಸೆ ಮಾರಿಯಾ ಕೊರ್ಡೊವಾ ತಿಳಿಸಿದ್ದಾರೆ.
 
ಬ್ರೆಜಿಟ್ ಫುಟ್ಬಾಲ್ ತಂಡದ ಆಟಗಾರರು ಬುಧವಾರದಂದು ಮೆಡಲಿನ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದರು ಎಂದು ಮೂಲಗಳು ತಿಳಿಸಿವೆ. 
 
ಅಪಘಾತಕ್ಕೀಡಾದ ವಿಮಾನದಲ್ಲಿ ಒಟ್ಟು 70 ಪ್ರಯಾಣಿಕರಿದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ ಸ್ಥಳೀಯ ಸಂಸ್ಥೆ ಚುನಾವಣೆ ಜಯಭೇರಿ: ಪ್ರಧಾನಿ ಮೋದಿ ಅಭಿನಂದನೆ