ಗೆಳೆಯರ ಮಂದೆ ನೃತ್ಯ ಮಾಡದ ಪತ್ನಿಯನ್ನು ನಗ್ನಗೊಳಿಸಿ ತಲೆಬೋಳಿಸಿದ ಪತಿ

Webdunia
ಸೋಮವಾರ, 1 ಏಪ್ರಿಲ್ 2019 (19:10 IST)
ಲಾಹೋರ್:  ಪಾಕಿಸ್ತಾನದ ಲಾಹೋರ್‌ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು ಪತಿಯ ಗೆಳೆಯರ ಮುಂದೆ ನೃತ್ಯ ಮಾಡಲು ನಿರಾಕರಿಸಿದ್ದಕ್ಕಾಗಿ ಪತಿಯೇ ಆಕೆಯನ್ನು ಎಲ್ಲೆರೆದುರಿಗೆ ನಗ್ನಗೊಳಿಸಿ ತಲೆಬೋಳಿಸಿದ ಹೇಯ ಘಟನೆ ವರದಿಯಾಗಿದೆ.  
ಪತಿ ಫೈಸಲ್ ಮನೆಗೆ ತನ್ನ ಇಬ್ಬರು ಗೆಳೆಯರನ್ನು ಕರೆದುಕೊಂಡು ಬಂದು ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಲ್ಲದೇ ನೃತ್ಯ ಮಾಡುವಂತೆ ಒತ್ತಡ ಹೇರಿದ. ಆದರೆ ನಾನು ನಿರಾಕರಿಸಿದಾಗ ನನ್ನನ್ನು ನಗ್ನಗೊಳಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ತಲೆಯನ್ನು ಬೋಳಿಸಿದ್ದಾನೆ ಎಂದು 22 ವರ್ಷ ವಯಸ್ಸಿನ ಆಸ್ಮಾ ಅಜೀಜ್ ದೂರು ನೀಡಿದ್ದಾಳೆ. 
 
ಘಟನೆಯ ಸಮಯದಲ್ಲಿ ಮನೆಯ ನೌಕರರಾದ ರಶೀದ್, ಅಮ್ಜಾದ್ ಮತ್ತು ಫರ್ಜಾನಾ ಉಪಸ್ಥಿತರಿದ್ದರು. ನಾನು ಮನೆಯಿಂದ ಹೊರಬರಲು ಪ್ರಯತ್ನಿಸಿದಾಗ ನನ್ನ ಗಂಡನು ಮ್ಯಾನ್ಹೋಲ್ ಹೊದಿಕೆಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ನನ್ನ ಗಂಡನೇ ನನ್ನ ತಲೆಯನ್ನು ಬೋಳಿಸಿದ್ದಾನೆ. ಆದರೆ, ನನ್ನ ಗೆಳತಿ ಬಂದು  ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾಳೆ. ಪೊಲೀಸರಿಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಕೋರಿದಾಗ 5,000 ರೂಪಾಯಿ ಲಂಚ ಕೇಳಿದ್ದಾರೆ ಎಂದು ಆಸ್ಮಾ ಆರೋಪಿಸಿದ್ದಾಳೆ.
 
ನ್ಯಾಯಾಧೀಶರ ಮುಂದೆ ಆಸ್ಮಾ ಹೇಳಿಕೆ ನೀಡಿ "ಪೊಲೀಸರು ಯಾವುದೇ ವರದಿಯನ್ನು ನೀಡಿಲ್ಲ ಅಥವಾ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಿಲ್ಲ, ಅವರು ಸಹಕಾರ ಮಾಡದ ಕಾರಣ ನಾನು ಅಳುತ್ತಾ ಪೊಲೀಸ್ ಠಾಣೆಯಿಂದ ಹೊರಬಂದಿದ್ದೇನೆ ಎಂದು ತಿಳಿಸಿದ್ದಾರೆ. 
 
ಆಸ್ಮಾ ಅಜೀಜ್ ನೀಡಿದ ದೂರಿನ ಮೇರೆಗೆ ಆರೋಪಿ ಪತಿ ಫೈಸಲ್‌ನನ್ನು ಬಂಧಿಸಲಾಗಿದೆ. ಪೊಲೀಸರ ಮುಂದೆ ಹೇಳಿಕೆ ನೀಡಿದ ಫೈಸಲ್ ನಾವಿಬ್ಬರು ದಂಪತಿಗಳು ಡ್ರಗ್ಸ್ ವ್ಯಸನಿಗಳಾಗಿದ್ದು. ಘಟನೆ ನಡೆದಾಗ ನನ್ನ ಮಾನಸಿಕ ಸ್ಥಿತಿ ನಿಯಂತ್ರಣದಲ್ಲಿರಲಿಲ್ಲ. ನಾವಿಬ್ಬರು ಸದಾ ಡ್ರಗ್ಸ್ ತೆಗೆದುಕೊಂಡು ಜಗಳವಾಡುತ್ತಿರುತ್ತೇವೆ ಎಂದು ತಿಳಿಸಿದ್ದಾನೆ.
 
ಆಸ್ಮಾ ಅಜೀಜ್ ದೂರಿನ ಮೇರೆಗೆ ಪೊಲೀಸರು ಆರೋಪಿ ಪತಿ ಮಿಯಾನ್ ಫೈಸಲ್ ವಿರುದ್ಧ ದೂರು ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ