Webdunia - Bharat's app for daily news and videos

Install App

ಪ್ರೇಮ ವಿವಾಹಕ್ಕೆ ಬೆಂಬಲ: ಪತ್ರಕರ್ತನ ಹತ್ಯೆ

Webdunia
ಗುರುವಾರ, 12 ಮೇ 2016 (19:14 IST)
ಪ್ರೇಮ ವಿವಾಹಕ್ಕೆ ಬೆಂಬಲ ನೀಡಿದನೆಂಬ ಕಾರಣಕ್ಕೆ ಪತ್ರಕರ್ತನನ್ನು ಹತ್ಯೆಗೈದ ಖಂಡನೀಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. 
 
ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು ಮೃತನನ್ನು 30 ವರ್ಷದ ಅಜ್ಮಲ್ ಜೋಯಿಯಾ ಎಂದು ಗುರುತಿಸಲಾಗಿದೆ.
 
ಅಜ್ಮಲ್ ಪ್ರೇಮಿಗಳಿಬ್ಬರು ಮದುವೆಯಾಗಲು ಸಹಾಯ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಹುಡುಗಿಯ ಕಡೆಯವರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಕೆಲಸ ಮುಗಿಸಿ ತನ್ನ ಸಂಬಂಧಿಕನ ಜತೆ ಮೋಟಾರ್ ಬೈಕ್‌ನಲ್ಲಿ ಮನಗೆ ಮರಳುತ್ತಿದ್ದ ಅಜ್ಮಲ್ ಮೇಲೆ ಮೂವರು ಬಂದೂಕುಧಾರಿಗಳು ಗುಂಡು ಹಾರಿಸಿದ್ದಾರೆ. ಸೋಮವಾರ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಅಜ್ಮಲ್ ಸಂಬಂಧಿ ಗಾಯಗೊಂಡಿದ್ದಾನೆ. 
 
ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ. 
 
ತನ್ನ ಸೇಹಿತೆಯೊಬ್ಬಳ ಪ್ರೇಮ ವಿವಾಹಕ್ಕೆ ಸಹಾಯ ಮಾಡಿದಳೆಂದು ಕಳೆದ ತಿಂಗಳು  ಅಬ್ಬೊಟಾಬಾದ್‌ನಲ್ಲಿ ಯುವತಿಯೋರ್ವಳನ್ನು ಕೊಂದು ಆಕೆಯ ದೇಹವನ್ನು ಸುಟ್ಟು ಹಾಕಲಾಗಿತ್ತು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments