Select Your Language

Notifications

webdunia
webdunia
webdunia
webdunia

ಪಾಕಿಸ್ತಾನದಲ್ಲೂ ವ್ಯಾಪಕವಾಗಿ ಹೆಚ್ಚುತ್ತಿದೆ ಪ್ರಧಾನಿ ಮೋದಿ ಮೇಲಿನ ಅಭಿಮಾನ

ಪಾಕಿಸ್ತಾನದಲ್ಲೂ  ವ್ಯಾಪಕವಾಗಿ ಹೆಚ್ಚುತ್ತಿದೆ ಪ್ರಧಾನಿ ಮೋದಿ  ಮೇಲಿನ ಅಭಿಮಾನ
ಕರಾಚಿ , ಮಂಗಳವಾರ, 29 ಜುಲೈ 2014 (09:33 IST)
ಪಾಕಿಸ್ತಾನದಲ್ಲಿ  ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಗಣನೀಯವಾಗಿ ಹೆಚ್ಚುತ್ತಿದ್ದು, ವಿಶೇಷವಾಗಿ ಲಾಹೋರ್‌ನಲ್ಲಿ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ವ್ಯಾಪಕವಾಗಿ ಏರಿಕೆಯಾಗುತ್ತಿದೆ ಎಂದು ತಿಳಿದು ಬಂದಿದೆ. 

ಗುಜರಾತಿನ ಸಾಬರಮತಿ ಮಾದರಿಯಲ್ಲಿ ಲಾಹೋರ್‌ನಲ್ಲಿ ರಾವಿ ನದಿ ಕ್ಷೇತ್ರ ಅಭಿವೃದ್ಧಿ ಯೋಜನೆ ಜಾರಿಯಲ್ಲಿದ್ದು, ಈ ಸಂಬಂಧ ಲಾಹೋರ್‌ ನಿಂದ  ಅಧಿಕಾರಿಗಳ ಒಂದು ತಂಡ ಅಹಮದಾಬಾದಿಗೆ ಭೇಟಿ ನೀಡಿತ್ತು. ಅಲ್ಲಿ ಗುಜರಾತ್ ಮಾದರಿ ಕುರಿತು ನಿರೀಕ್ಷಣೆ ನಡೆಸಿದ ಅವರು ಈ ಈ ಮಾದರಿಯ ಅಳವಡಿಕೆ ತುಂಬ ಕಡಿಮೆ ವೆಚ್ಚದ್ದು ಎಂಬುದನ್ನು ಕಂಡುಕೊಂಡಿದ್ದಾರೆ. 
 
ಈ ಸತ್ಯ ಬೆಳಕಿಗೆ ಬಂದ ನಂತರ ಮೋದಿಯ ಪ್ರಭಾವಲಯ ಮತ್ತಷ್ಟು ಪ್ರಭಾವಶಾಲಿಯಾಗಿದ್ದಷ್ಟೇ ಅಲ್ಲದೇ ಅವರ ಅಭಿಮಾನಿಗಳ ಸಂಖ್ಯೆಯಲ್ಲಿ ಕೂಡ ವೇಗವಾಗಿ ಹೆಚ್ಚಳ ಕಂಡು ಬಂತು. 
 
ಮೋದಿಯವರ ಗುಜರಾತ್ ಮಾಡೆಲ್‌ನಿಂದ ಪ್ರಭಾವಿತರಾಗಿದ್ದ ಪಾಕಿಸ್ತಾನ್ ಪ್ರಧಾನಿ ನವಾಜ್ ಶರೀಫ್  ಅವರೇ  ಈ ಕುರಿತು ಅಧ್ಯಯನ ನಡೆಸಲು ಅಹಮದಾಬಾದಿಗೆ ತೆರಳುವಂತೆ ಆದೇಶ ನೀಡಿದ್ದರು. ಮೋದಿಯವನ್ನು ಭೇಟಿ ಮಾಡುವ ಮೊದಲೇ ಶರೀಫ್ ಈ ಆದೇಶ ನೀಡಿದ್ದರು.  ಲಾಹೋರ್ ಪಾಕ್ ಪ್ರಧಾನಿಯ ತವರು ನಗರವಾಗಿದ್ದು, ರಾವಿ ನದಿ ಕ್ಷೇತ್ರದ ವಿಕಾಶ ಅವರ ಬಹು ನಿರೀಕ್ಷಿತ ಯೋಜನೆಯಾಗಿದೆ. 
 
ಅಹಮದಾಬಾದಿನಿಂದ ಮರಳಿದ ತಂಡದ  ಸಾಬರಮತಿ ನದಿ ಪ್ರದೇಶಾಭಿವೃದ್ಧಿ ಯೋಜನೆಯಲ್ಲಾದ ವೆಚ್ಚ, ರಾವಿ ನದಿ ಪ್ರದೇಶ ನಗರಾಭಿವೃದ್ಧಿ ಯೋಜನೆಯ ಅಂದಾಜುವೆಚ್ಚಕ್ಕಿಂತ ಅತಿ ಕಡಿಮೆ ಎಂದು ವರದಿ ನೀಡಿದೆ. ಇದರಿಂದ ನರೇಂದ್ರ ಮೋದಿಯವರ ಜನಪ್ರಿಯತೆ  ಭಾರತದ ಜತೆ ಕಡು ವೈರತ್ವ  ತೋರುವ ಪಾಕಿಸ್ತಾನದಲ್ಲೂ ಬೆಳಗಲು ಪ್ರಾರಂಭವಾಗಿದೆ. 

Share this Story:

Follow Webdunia kannada