Webdunia - Bharat's app for daily news and videos

Install App

ಅಮೆರಿಕದ ಗುಟುರಿಗೆ ಬೆಚ್ಚಿಬಿದ್ದ ಪಾಕ್: ಕಾಶ್ಮೀರದಲ್ಲಿ ಕಿಚ್ಚು ಹಚ್ಚುತ್ತಿದ್ದ ಹಫೀಜ್ ಸಂಘಟನೆ ಬ್ಯಾನ್

Webdunia
ಶನಿವಾರ, 1 ಜುಲೈ 2017 (17:33 IST)
ಪಾಕಿಸ್ತಾನ ಕೊನೆಗೂ ಮುಂಬೈ ದಾಳಿಯ ಉಗ್ರ ಹಫೀಜ್ ಸಯ್ಯಿದ್ ಸ್ಥಾಪಿಸಿದ್ದ ಜಮಾತ್ ಉದ್ ದವಾದ ಮತ್ತೊಂದು ಉಗ್ರ ಸಂಘಟನೆ ತಹ್ರೀಕ್ ಇ ಆಜಾದಿ ಜಮ್ಮು ಮತ್ತು ಕಾಶ್ಮೀರ್`ಗೆ ನಿಷೇಧ ಹೇರಿದೆ.
 

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಪಾಕಿಸ್ತಾನಕ್ಕೆ ನೀಡಿದ್ದ ನೆರವನ್ನ ಹಿಂಪಡೆದು ಶಾಕ್ ನೀಡಿತ್ತು. ಈ ಮಧ್ಯೆ, ಉಗ್ರ ತಾಣಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ  ಎಚ್ಚರಿಕೆ ನೀಡಿತ್ತು. ಅಮೆರಿಕದ ನಿರ್ಧಾರದಿಂದ ಬೆಚ್ಚಿಬಿದ್ದ ಪಾಕಿಸ್ತಾನ ಹಫೀಜ್ ಉಗ್ರ ಸಂಘಟನೆಗೆ ನಿಷೇಧ ಹೇರಿದೆ.

ಪಾಕಿಸ್ತಾನ ನಿಷೇಧಿಸಿರುವ ಈ ಉಗ್ರ ಸಂಘಟನೆ ಫೆಬ್ರವರಿ 5ರಂದು ಕಾಶ್ಮೀರ್ ಡೇ ಮಾಡಿ, ಕಾಶ್ಮೀರ ಸ್ವಾತಂತ್ರ್ಯ ರ್ಯಾಲಿಗಳನ್ನ ನಡೆಸಿತ್ತು. ಬಳಿಕ 90 ದಿನಗಳ ಕಾಲ ಹಫೀಜ್`ನನ್ನ ಗೃಹಬಂಧನದಲ್ಲಿ ಇರಿಸಲಾಗಿತ್ತು. 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಫೀಜ್ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿಯೇ ಈ ಸಂಘಟನೆ ಸ್ಥಾಪಿಸಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments