ವಾಷಿಂಗ್ಟನ್ : 3 ದಿನಗಳ ಹಿಂದಷ್ಟೇ ಎಲೋನ್ ಮಸ್ಕ್ ಟ್ವಿಟ್ಟರ್ನ ಲೋಗೋವನ್ನು ನೀಲಿ ಹಕ್ಕಿಯಿಂದ ಬದಲಾಯಿಸಿ ನಾಯಿಯ ಚಿತ್ರವನ್ನು ಇರಿಸಿದ್ದರು. ಮಸ್ಕ್ನ ಈ ಕ್ರಮ ಬಳಕೆದಾರರನ್ನು ಅಚ್ಚರಿಪಡಿಸಿದ್ದು ಮಾತ್ರವಲ್ಲದೇ ಭಾರೀ ಚರ್ಚೆಗೂ ಗ್ರಾಸವಾಗಿತ್ತು.
ನಾಯಿಯ ಲೋಗೋ ಟ್ವಿಟ್ಟರ್ನಲ್ಲಿ ಕೇವಲ ಕೆಲ ಗಂಟೆಗಳ ವರೆಗೆ ಮಾತ್ರವೇ ಇರಬಹುದು, ಶೀಘ್ರವೇ ಇದು ಮತ್ತೆ ಬದಲಾಗಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವಿಸಿದ್ದರು. ಆದರೆ ನಾಯಿಯ ಲೋಗೋವನ್ನು 3 ದಿನಗಳ ಕಾಲ ಹಾಗೇ ಇಡಲಾಗಿತ್ತು. ಇದೀಗ 3 ದಿನಗಳ ಬಳಿಕ ಟ್ವಿಟ್ಟರ್ನ ಲೋಗೋ ಮತ್ತೆ ನೀಲಿ ಹಕ್ಕಿಗೆ ಮರಳಿದೆ.
ಟ್ವಿಟ್ಟರ್ನಲ್ಲಿ ನಾಯಿಯ ಲೋಗೋ ವೆಬ್ ಬಳಕೆದಾರರಿಗೆ ಮಾತ್ರವೇ ಕಂಡುಬಂದಿದೆ. ಆ್ಯಪ್ ಬಳಕೆದಾರರಿಗೆ ಟ್ವಿಟ್ಟರ್ ಲೋಗೋದಲ್ಲಿ ಯಾವುದೇ ಬದಲಾವಣೆ ಕಾಣಿಸಿಕೊಳ್ಳದೇ ಕೇವಲ ನೀಲಿ ಹಕ್ಕಿ ಮಾತ್ರವೇ ಕಾಣಿಸಿಕೊಂಡಿದೆ. ಆದರೆ ಮಸ್ಕ್ ಲೋಗೋವನ್ನು ಏಕೆ ಬದಲಾಯಿಸಿದ್ದರು ಎಂಬುದು ಇನ್ನು ಕೂಡಾ ಗೊಂದಲಗಳಿಗೆ ಕಾರಣವಾಗಿದೆ.