Webdunia - Bharat's app for daily news and videos

Install App

ಆನಿವಾಸಿ ಭಾರತೀಯರ ಮಗು ಕಸಿದ ನಾರ್ವೆ

Webdunia
ಶನಿವಾರ, 24 ಡಿಸೆಂಬರ್ 2016 (08:39 IST)
ನಾರ್ವೆಯಲ್ಲಿ ಮತ್ತೆ ಭಾರತೀಯ ಮೂಲದ ದಂಪತಿಗಳ ಮಗುವನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ.
 
ನಾರ್ವೆಯಲ್ಲಿ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿರುವ ಅನಿಲ್ ಕುಮಾರ್ ಅವರ ಐದುವರೆ ವರ್ಷದ ಮಗುವನ್ನು ಕಳೆದ ಬುಧವಾರ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕರೆದೊಯ್ದಿದ್ದಾರೆ.
 
ಮಗುವಿಗೆ ದಂಪತಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ನಾರ್ವೆ ಅಧಿಕಾರಿಗಳು ಅಂಗನವಾಡಿಯಲ್ಲಿದ್ದ ಆರ್ಯನ್‌ನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
 
ನಾವು ಮಗುವನ್ನು ಕಡೆಗಣಿಸುತ್ತಿಲ್ಲ. ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವು. ಯಾವುದೇ ಮಾಹಿತಿಯನ್ನು ನೀಡದೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕುಮಾರ್ ಆರೋಪಿಸಿದ್ದು, ತಮ್ಮ ಮಗುವನ್ನು ಹಿಂದಕ್ಕೆ ಪಡೆಯಲು ಸಹಾಯ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
 
ವಿದೇಶಾಂಗ ಇಲಾಖೆ ಅವರಿಗೆ ನೆರವು ನೀಡುವ ಆಶ್ವಾಸನೆ ನೀಡಿದೆ. ಕಳೆದೈದು ವರ್ಷಗಳಲ್ಲಿ ಭಾರತೀಯ ದಂಪತಿ ಮಕ್ಕಳನ್ನು ನಾರ್ವೆ ಮಕ್ಕಳ ಕಲ್ಯಾಣ ಇಲಾಖೆ ವಶಪಡಿಸಿಕೊಂಡಿರುವುದು ಇದು ಮೂರನೆಯ ಪ್ರಕರಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಟ್ಲ: ಸಾರಡ್ಕ ಚೆಕ್ ಪೋಸ್ಟ್ ಬಳಿ ರಾತ್ರಿ ಸಂಚರಿಸುವಾಗ ಹುಷಾರ್: ದರೋಡೆ ಗ್ಯಾಂಗ್ ವಿಡಿಯೋ ವೈರಲ್

ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಕೇಳಿಬಂತು ಗಂಭೀರ ಆರೋಪ: ಏನಿದು ವಂಚನೆ ಪ್ರಕರಣ

ಅಮುಲ್ ನಮ್ದೇ, ನಂದಿನಿನೂ ನಮ್ದೇ: ಧ್ವೇಷ ಯಾಕೆ ಮಾಡ್ತೀರಿ ಎಂದ ಸಿಟಿ ರವಿ

ಸೇವ್ ನಂದಿನಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಮೆಟ್ರೋದಲ್ಲಿ ಅಮೂಲ್ ಗೆ ಅವಕಾಶ ಕೊಟ್ಟಿತಾ

ನಮ್ಮ ಹಣದಿಂದಲೇ ವಿಧಾನಸೌಧ ನಿರ್ಮಾಣ ಮಾಡಿರೋದು ಪ್ರವೇಶ ಶುಲ್ಕ ಯಾಕೆ: ಮೋಹನ್ ದಾಸ್ ಪೈ

ಮುಂದಿನ ಸುದ್ದಿ
Show comments