Webdunia - Bharat's app for daily news and videos

Install App

ಅಮೆರಿಕಕ್ಕೆ ಆಘಾತವನ್ನುಂಟುಮಾಡಿದ ಉತ್ತರ ಕೊರಿಯಾ

Webdunia
ಶನಿವಾರ, 29 ಜುಲೈ 2017 (11:33 IST)
ಜಗತ್ತಿಗೇ ದೊಡ್ಡಣ್ಣ ಎಂದು ಬೀಗುವ ಅಮೆರಿಕಕ್ಕೇ ದಂಗು ಬಡಿಸಿರುವ ಉತ್ತರ ಕೊರಿಯಾ ರಾಷ್ಟ್ರ ಇದೀಗ ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಮತ್ತೊಮ್ಮೆ ಸೆಡ್ಡು ಹೊಡೆದಿದೆ.

ಈ ಖಂಡಾಂತರ ಕ್ಷಿಪಣಿಯ ಮೂಲಕ ಅಮೆರಿಕದ ಪಶ್ಚಿಮ ಕರಾವಳಿಯ ಲಾಸ್ ಏಂಜಲೀಸ್, ಷಿಕಾಗೋ ನಗರಗಳೂ ಉತ್ತರ ಕೊರಿಯಾದ ಶಸ್ತ್ರಾಸ್ತ್ರಗಳ ಗುರಿಯಲ್ಲಿಯಲ್ಲಿರಲಿದ್ದು, ಬಹುತೇಕ ಅಮೆರಿಕದ ನಗರಗಳನ್ನ ಅಣ್ವಸ್ತ್ರಗಳಿಂದ ಉಡಾಯಿಸುವ ಸಾಮರ್ಥ್ಯ ನಮಗೆ ಬಂದಿದೆ ಎಂದು ಅಧ್ಯಕ್ಷ ಕಿಮ್ ಜೋಂಗ್ ಉನ್ ಬೀಗಿದ್ಧಾರೆ.
ಕೇವಲ 3 ವಾರಗಳ ಅಂತರದಲ್ಲಿ  ಉತ್ತರ ಕೊರಿಯಾ 2ನೇ ಖಂಡಾಂತರ ಕ್ಷಿಪಣಿ(ICBM) ಪರೀಕ್ಷೆ ನಡೆಸಿದ್ದು, ಕೇವಲ 47 ನಿಮಿಷಗಳಲ್ಲಿ ಈ ಕ್ಷಿಪಣಿ 3,724 ಕಿಮೀ ತಲುಪಿದೆಯಂತೆ. ಅಂದರೆ ಬಹುತೇಕ ಻ಮೆರಿಕದ ಪಶ್ಚಿಮ ಕರಾವಳಿಯ ನಗರಗಳನ್ನ ತಲುಪುವಷ್ಟು ಸಾಮರ್ಥ್ಯ ಹೊಂದಿದೆ.

ಎಚ್ ಡಬ್ಲ್ಯೂಸಾಂಗ್-14 ಖಂಡಾಂತರ ಕ್ಷಿಪಣಿ ಪರೀಕ್ಷೆ ಬಳಿಕ ಕಿಮ್ ಅತ್ಯಂತ ತೃಪ್ತಿ ವ್ಯಕ್ತಪಡಿಸಿದ್ದು, ಶುಕ್ರವಾರ ರಾತ್ರಿ ಸ್ವತಃ ಕಿಮ್ ಮಾರ್ಗದರ್ಶನದಲ್ಲಿ ಕ್ಷಿಪಣಿ ಪರೀಕ್ಷೆ ನಡೆದಿದೆ. ಅಮೆರಿಕದ ಪಶ್ಚಿಮ ಕರಾವಳಿಯ ಯಾವುದೇ ಪ್ರದೇಶವನ್ನ ಉಡಾಯಿಸುವ ಸಾಮರ್ಥ್ಯ ಈ ಕ್ಷಿಪಣಿ ಹೊಂದಿದೆ. ಉತ್ತರ ಕೊರಿಯಾದ ಈ ಪರೀಕ್ಷೆ ಅಮೆರಿಕಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಡೊನಾಲ್ಡ್ ಟ್ರಂಪ್ ಮುಂದಿನ ನಡೆ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments