Select Your Language

Notifications

webdunia
webdunia
webdunia
webdunia

ಅಮೆರಿಕದ ಜತೆ ಯಾವುದೇ ಯುದ್ಧಕ್ಕೆ ಸಿದ್ಧ: ಉ.ಕೊರಿಯಾ ನಾಯಕ ಕಿಮ್ ಜಾಂಗ್ ಉನ್

ಅಮೆರಿಕದ ಜತೆ ಯಾವುದೇ ಯುದ್ಧಕ್ಕೆ ಸಿದ್ಧ: ಉ.ಕೊರಿಯಾ ನಾಯಕ ಕಿಮ್ ಜಾಂಗ್ ಉನ್
ಉ.ಕೊರಿಯಾ , ಶನಿವಾರ, 10 ಅಕ್ಟೋಬರ್ 2015 (17:04 IST)
ತಮ್ಮ ರಾಷ್ಟ್ರವು ಅಮೆರಿಕದ ಸಾಮ್ರಾಜ್ಯಶಾಹಿಗಳು ಹೂಡುವ ಯಾವುದೇ ರೀತಿಯ ಯುದ್ಧವನ್ನು ಎದುರಿಸಲು ಸಿದ್ಧವಿದೆಯೆಂದು ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಶನಿವಾರ ತಿಳಿಸಿದ್ದಾರೆ.  ಆಡಳಿತಾರೂಢ ವರ್ಕರ್ಸ್ ಪಕ್ಷದ ಸಂಸ್ಥಾಪನಾ ವಾರ್ಷಿಕ ದಿನದಂದು ಟೆಲಿಪ್ರಸಾರದ ಭಾಷಣದದಲ್ಲಿ ಕಿಮ್ ಮಾತನಾಡುತ್ತಿದ್ದರು. 
 
ಪಕ್ಷದ ಕ್ರಾಂತಿಕಾರಿ ಸಶಸ್ತ್ರ ದಳ ಎಂದರೆ ಅಮೆರಿಕದ ಸಾಮ್ರಾಜ್ಯಶಾಹಿಗಳು ಹೂಡುವ ಯಾವುದೇ ಯುದ್ಧ ಎದುರಿಸಲು ಸಿದ್ಧವಿದೆ ಎಂದರ್ಥ ಎಂದು ಕಿಮ್ ಹೇಳಿದರು. ಆ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಪ್ರತಿನಿಧಿಯಾಗಿ ಚೀನಾದ ಕಮ್ಯುನಿಸ್ಟ್ ಪಕ್ಷದ ಅಧಿಕಾರಿ ಉಪಸ್ಥಿತರಿದ್ದರು.

 ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿದ್ದ ಸಮರಾಭ್ಯಾಸಗಳನ್ನು ಉತ್ತರ ಕೊರಿಯಾ ಖಂಡಿಸಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಯುದ್ಧಕ್ಕಾಗಿ ಸಿದ್ಧತೆ ನಡೆಸುತ್ತಿವೆ ಎಂದು ಆಗಾಗ್ಗೆ ಖಂಡನೆ ವ್ಯಕ್ತಪಡಿಸಿತ್ತು. 
 

Share this Story:

Follow Webdunia kannada