Webdunia - Bharat's app for daily news and videos

Install App

ಕಾಠ್ಮಂಡು: ರನ್ ವೇಯಲ್ಲಿ ಆಯ ತಪ್ಪಿ ಅಪಘಾತಕ್ಕೀಡಾದ ನೇಪಾಳ ವಿಮಾನ

Webdunia
ಬುಧವಾರ, 4 ಮಾರ್ಚ್ 2015 (16:57 IST)
ರನ್ ವೇಯಲ್ಲಿ ಆಯ ತಪ್ಪಿದ ಪರಿಣಾಮ ನೇಪಾಳ ವಿಮಾನವೊಂದು ಇದ್ದಕ್ಕಿದ್ದಂತೆ ನೆಲಕ್ಕಪ್ಪಳಿಸಿ ಅಪಘಾತಕ್ಕೀಡಾಗಿರುವ ಘಟನೆ ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. 
 
ಎ 330 ಎಂಬ ಹೆಸರಿನ ವಿಮಾನ ಅಪಘಾತಕ್ಕೀಡಾಗಿದ್ದು, ದಟ್ಟ ಮಂಜು ಕವಿದಿದ್ದ ಕಾರಣ ವಿಮಾನವನ್ನು ಎರಡನೇ ಬಾರಿಗೆ ಲ್ಯಾಂಡ್ ಮಾಡಲು ಪೈಲಟ್ ಮುಂದಾಗಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಪೈಲಟ್ ಅವರ ಸಮಯ ಪ್ರಜ್ಞೆಯಿಂದ ವಿಮಾನದಲ್ಲಿನ ಯಾರೊಬ್ಬರಿಗೂ ಕೂಡ ಅನಾಹುತವಾಗಿಲ್ಲ ಎಂದು ತಿಳಿದು ಬಂದಿದೆ. ವಿಮಾನದಲ್ಲಿ ಪೈಲಟ್ ಸೇರಿದಂತೆ 227 ಮಂದಿ ಪ್ರಯಾಣಿಕರು ಹಾಗೂ 15 ಮಂದಿ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. 
 
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಬೆಳ್ಳಂಬೆಳಗ್ಗೆ ಸುರಿಯುತ್ತಿದ್ದ ಮಳೆ ಹಾಗೂ ಮಂಜು ಕಾರಣವಾಗಿದ್ದು, ರನ್ ವೇ ಕಾಣಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments