Select Your Language

Notifications

webdunia
webdunia
webdunia
webdunia

ನಮ್ಮ ಗುರಿ ಸ್ಕಿಲ್ ಇಂಡಿಯಾ ಆದರೆ ಸ್ಕ್ಯಾಮ್ ಇಂಡಿಯಾ ಅಲ್ಲ : ಮೋದಿ

ನಮ್ಮ ಗುರಿ ಸ್ಕಿಲ್ ಇಂಡಿಯಾ ಆದರೆ ಸ್ಕ್ಯಾಮ್ ಇಂಡಿಯಾ ಅಲ್ಲ : ಮೋದಿ
ಟೊರೆಂಟೊ , ಗುರುವಾರ, 16 ಏಪ್ರಿಲ್ 2015 (12:17 IST)
ಜಾಗತಿಕ ಬೆಳವಣಿಗೆಗೆ ಶಕ್ತಿನೀಡಲು ಭಾರತ ನಮ್ಮ ಕಾರ್ಮಿಕಶಕ್ತಿಯನ್ನು ಒದಗಿಸುತ್ತದೆ. ನಮ್ಮ ಗುರಿ ಕೌಶಲ್ಯದಿಂದ ತುಂಬಿದ  ಭಾರತವೇ ಹೊರತು ಹಗರಣಪೀಡಿತ ಭಾರತವಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಕೆನಡಾದ ಟೊರಂಟೋದ ರಿಕೋ ಕಾಲಿಸಿಯಂನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ತಾವು 10 ತಿಂಗಳ ಹಿಂದೆ ಅಧಿಕಾರ ಹಿಡಿದಾಗಿನಿಂದ ನಂಬಿಕೆಯ ಹೊಸ ವಾತಾವರಣ ಮೂಡಿದೆ ಎಂದು ಹೇಳಿದರು.
 
ನಾವು ಜನ ಗಣ ಮನ ಅಧಿನಾಯಕ್ ಎಂದು ಹೇಳುತ್ತೇವೆ. ಆ ಜನ ಮನ್ ಬದಲಾಗಿದೆ ಎಂದು ಸುಮಾರು 10,000 ಜನರಿದ್ದ ಭಾರತೀಯ ಸಮುದಾಯಕ್ಕೆ ಮನದಟ್ಟು ಮಾಡಿದರು. ಭಾರತ ಎದುರಿಸುವ ಎಲ್ಲಾ ಸಮಸ್ಯೆಗೆ ಅಭಿವೃದ್ಧಿ ಪರಿಹಾರವಾಗಿದೆ. ದೇಶವು ಅಗತ್ಯವಾದ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದೆ. ಅದಕ್ಕೆ ಅವಕಾಶಗಳ ಅಗತ್ಯವಿದೆ ಎಂದರು. 
 
ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ಮಾಡಿದ ಮೋದಿ ಅವ್ಯವಸ್ಥೆಯ ಸ್ಥಿತಿಯನ್ನು ಸೃಷ್ಟಿಸಿ ನಿರ್ಗಮಿಸಿದರು. ಅದನ್ನು ನಾವು ಸ್ವಚ್ಛಗೊಳಿಸಲು ಹೊರಟಿದ್ದೇವೆ ಎಂದು ಟೀಕಿಸಿದರು. 
 
 ಮೋದಿ, ಮೋದಿ ಎಂದು ಸಭಿಕರು ಹರ್ಷೋದ್ಗಾರ ಮಾಡಿದಾಗ, ಭಾರತದಲ್ಲಿ ಆಗುತ್ತಿರುವುದೆಲ್ಲಾ ನನ್ನಿಂದಲ್ಲ, ಭಾರತದ ಜನತೆಯಿಂದ ಎಂದು ನುಡಿದರು. 

Share this Story:

Follow Webdunia kannada