Webdunia - Bharat's app for daily news and videos

Install App

ಅಲ್ಲಾಹ ಎಂದು ಉದ್ಗರಿಸಿದ್ದಕ್ಕೆ ವಿಮಾನದಿಂದ ಕೆಳಗಿಳಿಸಿದರು

Webdunia
ಶನಿವಾರ, 6 ಆಗಸ್ಟ್ 2016 (15:58 IST)
ಸುಸ್ತಾಯಿತೆಂದು ‘ಅಲ್ಲಾಹ್‌’ ಎಂದಿದ್ದಕ್ಕೆ ಪಾಕ್- ಅಮೇರಿಕನ್  ದಂಪತಿಯನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ಷಿಕಾಗೊದಲ್ಲಿ ನಡೆದಿದೆ.

‘ವಿಮಾನದೊಳಗೆ ನಾವು ಸುಸ್ತಾಗಿದ್ದೆವು. ಈ ಸಂದರ್ಭದಲ್ಲಿ ನಮಗರಿವಿಲ್ಲದೆ ಅಲ್ಲಾಹ್‌ ಎಂಬ ಉದ್ಗಾರ ಬಂತು. ಈ ಕಾರಣಕ್ಕೆ ನಮ್ಮನ್ನು ಕೆಳಗೆ ಇಳಿಸಲಾಯಿತು’ ಎಂದು ನಾಝಿಯಾ ಮತ್ತು ಫೈಜಲ್ ಅಲಿ ದಂಪತಿ ಡೆಲ್ಟಾ ಏರ್‌ಲೈನ್ಸ್ ವಿರುದ್ಧ ದೂರಿದ್ದಾರೆ.

ದಂಪತಿ ಪ್ಯಾರಿಸ್‌ನಿಂದ ಓಹಿಯೋದ ಸಿನ್ಸಿನಾಟಿಗೆ ಹೊರಟಿದ್ದರು. ವಿಮಾನದೊಳಗೆ ಬಂದ ಕೂಡಲೇ ತಮ್ಮ ಶೂ ಬಿಚ್ಚಿಟ್ಟ ನಾಝಿಯಾ ತಂದೆ-ತಾಯಿಗಳಿಗೆ ಮೊಬೈಲ್ ಸಂದೇಶ ಕಳುಹಿಸಿ, ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ಒಂಬತ್ತು ಗಂಟೆಗಳ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು. ಈ ಸಂದರ್ಭದಲ್ಲೇ ವಿಮಾನದ ಸಿಬ್ಬಂದಿ ಅವರ ಬಳಿ ಬಂದು  ಆಕ್ಷೇಪ ವ್ಯಕ್ತಪಡಿಸಿದ್ದರು.

‘ಮುಸ್ಲಿಂ ಮಹಿಳೆ ಸ್ಕಾರ್ಫ್‌ ಧರಿಸಿದ್ದಾಳೆ, ಆಕೆಯ ಜತೆಗಿದ್ದ ಪುರುಷ ಮೊಬೈಲ್ ಫೋನ್ ಮುಚ್ಚಿಡುತ್ತಿದ್ದಾನೆ, ಜತೆಗೆ  ‘ಅಲ್ಲಾಹ್‌’ ಎನ್ನುತ್ತಿದ್ದಾನೆ. ಈ ಮುಸ್ಲಿಂ ದಂಪತಿ ಜತೆ ಪ್ರಯಾಣಿಸಲು ನಮಗೆ ಕಂಪರ್ಟೇಬಲ್ ಎನ್ನಿಸುತ್ತಿಲ್ಲ’ ಎಂದು ವಿಮಾನದ ಸಿಬ್ಬಂದಿಯೊಬ್ಬರು ಪೈಲೆಟ್‌ಗೆ ದೂರು ನೀಡಿದ್ದರು.

ಕೂಡಲೇ ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿದ ಪೈಲಟ್ ಈ ಕುರಿತು ‘ಮುಸ್ಲಿಂ ದಂಪತಿಯನ್ನು ಕೆಳಗಿಳಿಸುವವರೆಗೆ ವಿಮಾನ ಹಾರಾಟ ನಡೆಸುವುದಿಲ್ಲ ಎಂದರು. ದಂಪತಿಯನ್ನು ಕೆಳಗಿಳಿಸಿ ವಿಮಾನ ಪ್ರಯಾಣವನ್ನು ಮುಂದುವರೆಸಲಾಯಿತು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಇಳಿಕೆ

ಅಲ್ಪಸಂಖ್ಯಾತರಿಗೆ ವಸತಿ ಯೋಜನೆ ಎಂದ ಸಿದ್ದರಾಮಯ್ಯ: ಹಾಗೆಂದ್ರೆ ಯಾರು ಸಾರ್ ಎಂದ ನೆಟ್ಟಿಗರು

ಬಿಜೆಪಿಗೆ ಮತ್ತೆ ನೀವೇ ಅಧ್ಯಕ್ಷರಾ ಎಂದು ಕೇಳಿದ್ದಕ್ಕೆ ವಿಜಯೇಂದ್ರ ಹೇಳಿದ್ದೇನು ಗೊತ್ತಾ

ಕೇಂದ್ರ ಹೇಳಿದಂತೇ ನಾವು ಅಲ್ಪ ಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು: ಸಿದ್ದರಾಮಯ್ಯ

ಬಿಜೆಪಿ ಯೋಗ ದಿನಾಚರಣೆಯಲ್ಲಿ ನಟಿ ಸುಧಾರಾಣಿ, ನಟ ಕೋಮಲ್

ಮುಂದಿನ ಸುದ್ದಿ
Show comments