Webdunia - Bharat's app for daily news and videos

Install App

ಮೋದಿ ಪ್ರವಾಸ ಫಲಪ್ರದ: ಜಪಾನ್‌ನಿಂದ 35 ಶತಕೋಟಿ ಡಾಲರ್ ಹೂಡಿಕೆ ಭರವಸೆ

Webdunia
ಸೋಮವಾರ, 1 ಸೆಪ್ಟಂಬರ್ 2014 (19:53 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜಪಾನ್ ಪ್ರವಾಸ ಯಾವ ರೀತಿಯ ಫಲಿತಾಂಶ ನೀಡಿರಬಹುದು. ಜಪಾನ್ ಪ್ರವಾಸ ಮೋದಿಗೆ ಫಲಪ್ರದವಾಗಿದೆ ಎನ್ನುವುದಕ್ಕೆ ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 35 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಿರುವುದು ಸಾಕ್ಷಿ ಒದಗಿಸಿದೆ.  ಜಪಾನಿನಲ್ಲಿ ಮೋದಿ ಪ್ರವಾಸದ ಇತ್ತೀಚಿನ 10 ಬೆಳವಣಿಗೆಗಳು ಕೆಳಗೆ ನೀಡಲಾಗಿದೆ.
 
 1. ಜಪಾನ್ ಐದು ವರ್ಷಗಳಲ್ಲಿ 35 ಟ್ರಿಲಿಯನ್ ಯೆನ್( 33.58 ಶತಕೋಟಿ ಅಮೆರಿಕ ಡಾಲರ್) ಭಾರತದ ಮೂಲಸೌಲಭ್ಯ ಯೋಜನೆಗಳಲ್ಲಿ ಮತ್ತು ಸ್ಮಾರ್ಟ್ ಸಿಟಿ ನಿರ್ಮಾಣಗಳಲ್ಲಿ ಹೂಡಿಕೆ ಮಾಡಲಿದೆ. ಭಾರತದಲ್ಲಿ  ಮೋದಿಯ ಅಚ್ಚುಮೆಚ್ಚಿನ ಯೋಜನೆಯಾದ ಬುಲೆಟ್ ರೈಲುಗಳನ್ನು ಪರಿಚಯಿಸಲು ಜಪಾನ್ ಹಣಕಾಸು, ತಾಂತ್ರಿಕ ಬೆಂಬಲವನ್ನು ನೀಡುತ್ತದೆ.

2. ಪ್ರಧಾನಿ ಜಪಾನಿನ ಉನ್ನತ ಕೈಗಾರಿಕೋದ್ಯಮಿಗಳನ್ನು ಭೇಟಿ ಮಾಡಿ, "ಗುಜರಾತಿಯಾಗಿ, ಹಣವು ನನ್ನ ರಕ್ತದಲ್ಲಿದೆ, ವಾಣಿಜ್ಯ ನನ್ನ ರಕ್ತದಲ್ಲಿದೆ. ಉದ್ಯಮಗಳಿಗೆ ವಿನಾಯಿತಿ ನೀಡುವ ಅಗತ್ಯವಿಲ್ಲ.ಅವುಗಳು ಪ್ರವರ್ಧಿಸಲು ಸೂಕ್ತ ಪರಿಸರ ಸೃಷ್ಟಿಸಬೇಕು" ಎಂದು ಹೇಳಿದರು.
 
3. ತಮ್ಮ ಸರ್ಕಾರದ ರಚನೆಯೊಂದಿಗೆ ನಿರಾಶೆಯ ವಾತಾವರಣ ಕೊನೆಗೊಂಡಿದೆ ಎಂದು ಮೋದಿ ಭರವಸೆ ನೀಡಿದರು. ಜಪಾನಿನ ಹೂಡಿಕೆದಾರರಿಗೆ ಉದ್ಯಮ ಸ್ಥಾಪನೆಗೆ ತಕ್ಷಣದ ಅನುಮತಿ ಮತ್ತು ನೆರವು ನೀಡುವುದಾಗಿ ಅವರು ತಿಳಿಸಿದರು.ಜಪಾನಿನ ಉದ್ಯಮಿಗಳನ್ನು ಮನವೊಲಿಸುತ್ತಾ, ಪ್ರಥಮ ತ್ರೈಮಾಸಿಕದಲ್ಲಿ ಭಾರತದ ಶೇ. 5.7 ರ ಆರ್ಥಿಕ ಪ್ರಗತಿಯನ್ನು ಉದಾಹರಿಸಿದರು.

4.ಸರ್ಕಾರದ 100 ದಿನಗಳ ಸಾಧನೆಯನ್ನು ಉಲ್ಲೇಖಿಸಿ, 'ಇದೊಂದು ದೊಡ್ಡ ದಾಪುಗಾಲು. ಈಗ ಪರಿಷ್ಕೃತ ಆಶಾಭಾವನೆ ಮೂಡಿದೆ' ಎಂದರು. ಬೇರೆ ರಾಷ್ಟ್ರದ ನೆಲ ಕಸಿದುಕೊಂಡು, ಸಮುದ್ರ ಜಲ ಪ್ರದೇಶ ಆಕ್ರಮಿಸಿ ಅದು ವಿಸ್ತರಣೆ ಎಂದು ಯೋಚಿಸುವ 18ನೇ ಶತಮಾನದ ಶೈಲಿಯನ್ನೂ ಅನುಸರಿಸುವ ರಾಷ್ಟ್ರಗಳಿವೆ ಎಂದು ಪರೋಕ್ಷವಾಗಿ ಚೀನಾವನ್ನು ಹೆಸರಿಸದೇ ದೂರಿದರು. ಏಷ್ಯಾ 21ನೇ ಶತಮಾನದಲ್ಲಿ ನಾಯಕನಾಗಬೇಕಾದರೆ, ಜಪಾನ್ ಮತ್ತು ಭಾರತ ಮುನ್ನೆಡಸಬೇಕು ಮತ್ತು ಶಾಂತಿಯುತ ಅಭಿವೃದ್ಧಿಯ ಹಾದಿಗೆ ಉತ್ತೇಜನ ನೀಡಬೇಕು ಎಂದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ