Select Your Language

Notifications

webdunia
webdunia
webdunia
webdunia

ಪಾಕಿಸ್ತಾನ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

ಪಾಕಿಸ್ತಾನ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ
ಕರಾಚಿ , ಭಾನುವಾರ, 29 ಮೇ 2016 (15:02 IST)
ಆಘಾತಕಾರಿ ಘಟನೆಯೊಂದರಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಮನೆಯ ಮಾಳಿಗೆಯಿಂದ ಹೊರಗೆ ಎಸೆದ ಹೇಯ ಘಟನೆ ಪಾಕಿಸ್ತಾನದ ಕರಾಚಿಯಿಂದ ವರದಿಯಾಗಿದೆ.
 
ಪೋಸ್ಟ್ ಮಾರ್ಟಂ ವರದಿಯ ಪ್ರಕಾರ, ಬಾಲಕಿಯ ಮೇಲೆ ಮೊದಲು ಅತ್ಯಾಚಾರವೆಸಗಲಾಗಿದ್ದು, ನಂತರ ಮನೆಯ ಮಾಳಿಗೆಯಿಂದ ಹೊರಗೆ ಎಸೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರವೆಸಗಿರುವುದು ಸಾಬೀತಾಗಿದ್ದು, ತಲೆಯ ಮೇಲೆ ಗಂಭೀರವಾದ ಗಾಯಗಳಾಗಿವೆ ಎಂದು ಜಿನ್ನಾ ಆಸ್ಪತ್ರೆಯ ವೈದ್ಯರಾದ  ಸೀಮಿ ಜಮಾಲಿ ತಿಳಿಸಿದ್ದಾರೆ.
 
ಪೊಲೀಸ್ ಅಧಿಕಾರಿ ಅಸ್ಮಾತುಲ್ಲಾ ಮಾರ್ವತ್ ಮಾತನಾಡಿ, ಬಾಲಕಿಯ ಕುಟುಂಬದವರ ಪ್ರಕಾರ ಆಕೆ ಮನೆಯ ಮಾಳಿಗೆಯ ಮೇಲೆ ಆಟವಾಡಲು ತೆರಳಿದ್ದಾಗ, ಅಲ್ಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
 
ಪಾಕಿಸ್ತಾನದಲ್ಲಿ ಪ್ರತಿದಿನ 10 ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗುತ್ತದೆ ಎಂದು ಮಕ್ಕಳ ಹಕ್ಕು ಮತ್ತು ರಕ್ಷಣಾ ಆಯೋಗದ ವರದಿಗಳು ಆತಂಕ ವ್ಯಕ್ತಪಡಿಸಿವೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ಕಿರಣ್ ಭೇಡಿ ಅಧಿಕಾರ ಸ್ವೀಕಾರ