Select Your Language

Notifications

webdunia
webdunia
webdunia
webdunia

ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ: ನಾಲ್ವರು ಉಗ್ರರ ಹತ್ಯೆ

ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ:  ನಾಲ್ವರು ಉಗ್ರರ ಹತ್ಯೆ
ಜಲಾಲಾಬಾದ್: , ಬುಧವಾರ, 2 ಮಾರ್ಚ್ 2016 (16:20 IST)
ಭಾರತದ ರಾಯಭಾರಿ ಕಚೇರಿ ಮೇಲೆ ದಾಳಿಗೆ ಯತ್ನಿಸಿ 6 ಜನರನ್ನು ಗಾಯಗೊಳಿಸಿದ ಆತ್ಮಾಹುತಿ ಬಾಂಬರ್‌ಗಳಿಗೆ ಆಫ್ಘನ್ ಮತ್ತು ಭಾರತೀಯ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ. ಕಾರಿನಲ್ಲಿ ಬಾಂಬೊಂದನ್ನು ಇರಿಸಿದ್ದ ಭಯೋತ್ಪಾದಕರು ಭಾರತದ ರಾಯಭಾರಿ ಕಚೇರಿ ಬಳಿ  ಸ್ಫೋಟಿಸಿದರು.

ಇದರಿಂದ ಬಾಗಿಲುಗಳು, ಕಿಟಕಿಗಳು ಚೂರುಚಾರಾಗಿ ಕನಿಷ್ಠ 8 ಕಾರುಗಳು ನಾಶಗೊಂಡವು. ಸ್ಫೋಟಗಳು ಮತ್ತು ಗುಂಡಿನ ದಾಳಿ ಇಡೀ ಪ್ರದೇಶದಲ್ಲಿ ಮಾರ್ದನಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 
 
 ಅವರು ಭಾರತದ ರಾಯಭಾರ ಕಚೇರಿ ಮೇಲೆ ಗುರಿಯಿರಿಸಿದ್ದರು. ಆದರೆ ನಮ್ಮ ಪಡೆಗಳು ಅವರ ಗುರಿಯನ್ನು ಮುಟ್ಟುವ ಮುನ್ನವೇ ಗುಂಡಿಕ್ಕಿ ಎಲ್ಲರನ್ನೂ ಹತ್ಯೆ ಮಾಡಿದರು ಎಂದು ನಗರ‌್‌ಹರ್ ಪ್ರಾಂತ್ಯದ ವಕ್ತಾರ ಅಟ್ಟಾಹುಲ್ಲಾ ಖುಗ್ಯಾನಿ ತಿಳಿಸಿದರು. 

Share this Story:

Follow Webdunia kannada