Webdunia - Bharat's app for daily news and videos

Install App

ಮುಳುಗಿದ ದೋಣಿ: ನೂರಾರು ಜನರು ಸತ್ತಿರುವ ಶಂಕೆ

Webdunia
ಭಾನುವಾರ, 19 ಏಪ್ರಿಲ್ 2015 (17:06 IST)
ಸುಮಾರು 700 ಮಂದಿ ಅಕ್ರಮ ವಲಸಿಗರನ್ನು ಹೊತ್ತ ದೋಣಿಯೊಂದು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ್ದು ನೂರಾರು ಜನರು ಅಸುನೀಗಿದ್ದಾರೆಂದು ವರದಿಯಾಗಿದೆ. 
 ಸುಮಾರು 500ರಿಂದ 700 ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮಧ್ಯರಾತ್ರಿ ಸ್ಥಳೀಯ ಕಾಲಮಾನದಲ್ಲಿ ಲಿಬ್ಯಾ ಜಲಪ್ರದೇಶದಲ್ಲಿ ಮುಳುಗಿದೆ. 
 
 ಈ ವರ್ಷಾರಂಭದಲ್ಲಿ ಮೆಡಿಟರೇನಿಯನ್ ಸಮುದ್ರ ದಾಟುತ್ತಿದ್ದ ಕನಿಷ್ಠ 900 ಅಕ್ರಮ ವಲಸಿಗರು ಸತ್ತಿದ್ದಾರೆ. ಕಳೆದ ವಾರವಷ್ಟೇ ಇಟಲಿಯ ಕರಾವಳಿ ಪಡೆ ಮುಳುಗುತ್ತಿದ್ದ ದೋಣಿಯಿಂದ 10,000 ಜನರನ್ನು ರಕ್ಷಣೆ ಮಾಡಿದ್ದರು. 
 
 ರಕ್ಷಣಾ ಕಾರ್ಯಾಚರಣೆಯಲ್ಲಿ 20 ಹಡಗುಗಳು ಮತ್ತು 3 ಹೆಲಿಕಾಪ್ಟರು‌ಗಳು ಕಾರ್ಯನಿರತವಾಗಿವೆ.  ಹಾದುಹೋಗುತ್ತಿದ್ದ ಹಡಗೊಂದರ ಗಮನಸೆಳೆಯಲು ವಲಸಿಗರು ದೋಣಿಯ ಒಂದು ಬದಿಗೆ ಬಂದಿದ್ದರಿಂದ ದೋಣಿ ಮುಳುಗಿತೆಂದು ಹೇಳಲಾಗುತ್ತಿದೆ.
 
ಕಳೆದ ವರ್ಷ ದಾಖಲೆ 1,70,00 ಜನರು ಬಡತನದ ಬೇಗೆಯಿಂದ ಮತ್ತು ಸಂಘರ್ಷದಿಂದ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಿಂದ ಇಟಲಿಯನ್ನು ದಾಟಿದ್ದರು. ಸಾವಿರಾರು ಜನರು ಈ ಪ್ರಯಾಣದಲ್ಲಿ ಅಸುನೀಗಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments