Webdunia - Bharat's app for daily news and videos

Install App

ಮಗುವನ್ನು ನೀರಿಗೆಸೆದು ಕೊಂದವನಿಗೆ 100 ವರ್ಷ ಜೈಲು

Webdunia
ಶುಕ್ರವಾರ, 23 ಸೆಪ್ಟಂಬರ್ 2016 (08:50 IST)
3 ವರ್ಷದ ಮಲಮಗಳನ್ನು ಈಜುಕೊಳದಲ್ಲಿ ಎಸೆದು ಸಾಯಿಸಿದ ಪಾಪಿ ತಂದೆಗೆ ಮೆಕ್ಸಿಕೋದಲ್ಲಿ 100 ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ. 
ಆಗಸ್ಟ್ 12, 2015ರಲ್ಲಿ ಮಿಚೋಕನ್ ನಗರದ ಹೊಟೆಲ್ ಒಂದರ ಈಜುಕೊಳದಲ್ಲಿ ಈ ಅಮಾನುಷ ಕೃತ್ಯವನ್ನು ಎಸಗಲಾಗಿತ್ತು. 
 
ಕ್ರೂರ ತಂದೆ ಜೋಸ್ ಡೇವಿಡ್ ಎನ್. ತನ್ನ ಪತ್ನಿ ಹೊಟೇಲ್ ಕೋಣೆಯಲ್ಲಿ ಮಲಗಿದ್ದಾಗ ಮೂರು ವರ್ಷದ ಮಗಳನ್ನು ಈಜುಕೊಳದಲ್ಲಿ ಮುಳುಗಿಸಿ ಕೊಂದಿದ್ದ. ಆತ ಆಕೆ ಒದ್ದಾಡುತ್ತಿದ್ದುದನ್ನು ನೋಡಿದರೂ ಆತನ ಕಲ್ಲು ಹೃದಯ ಕರಗಲಿಲ್ಲ. ಬಳಿಕ ಆಕೆಯ ತಲೆಯನ್ನು ಹಿಡಿದು ನೀರಿನಲ್ಲಿ ಮತ್ತೆ ಮುಳುಗಿಸಿದ್ದ. ಈ ಎಲ್ಲ ದೃಶ್ಯಾವಳಿಗಳು ಹೊಟೆಲ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.
 
ತನ್ನ ಗಂಡನೇ ಮಗುವನ್ನು ಕೊಂದಿದ್ದು ಎಂಬುದು ತಾಯಿಗೆ ಸಿಸಿ ಕ್ಯಾಮರಾ ನೋಡಿದ ಬಳಿಕ ಬೆಳಕಿಗೆ ಬಂದಿತ್ತು. ಸಿಸಿ ಟಿವಿ ಕ್ಯಾಮರಾ ನೋಡಿದ ಬಳಿಕ ನ್ಯಾಯಾಧೀಶರು ಶಿಕ್ಷೆಯ ಅವಧಿಯನ್ನು 100 ವರ್ಷಗಳಿಗೆ ಏರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Terror Attack: ಪ್ರವಾಸಿಗರ ಮೇಲಿನ ದಾಳಿಗೆ ರೊಚ್ಚಿಗೆದ್ದ ಶಾರುಖ್ ಖಾನ್‌, ಪೋಸ್ಟ್ ಮಾಡಿ ಹೀಗಂದ್ರು

Terror Attack, 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Terror Attack: ಉಗ್ರರ ವಿರುದ್ಧ ರಾಜಿಯಿಲ್ಲದ ನಿರ್ಧಾರ ಕೈಗೊಳ್ಳುತ್ತೇವೆ, ರಾಜನಾಥ್ ಸಿಂಗ್‌ ತಿರುಗೇಟು

Rahul Gandhi: ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಿದಾಗಲೆಲ್ಲಾ ದೇಶದಲ್ಲಿ ಅನಾಹುತವಾಗುತ್ತದೆ: ಕರ್ನಾಟಕ ಬಿಜೆಪಿ ಆರೋಪ

Pahalgam Terror Attack: ಗಾಯಗೊಂಡವರನ್ನು ಭೇಟಿಯಾಗಿ, ಧೈರ್ಯ ತುಂಬಿದ ಅಮಿತ್ ಶಾ

ಮುಂದಿನ ಸುದ್ದಿ
Show comments