Select Your Language

Notifications

webdunia
webdunia
webdunia
webdunia

ಟಾಯ್ಲೆಟ್‌ಗೆಂದು ಹೋದ... ಟ್ಯಾಂಕ್ ಎತ್ತಿಕೊಂಡು ಪರಾರಿಯಾದ

ಟಾಯ್ಲೆಟ್‌ಗೆಂದು ಹೋದ... ಟ್ಯಾಂಕ್ ಎತ್ತಿಕೊಂಡು ಪರಾರಿಯಾದ
ಸಿಯಾಟಲ್‌ , ಸೋಮವಾರ, 19 ಮೇ 2014 (11:03 IST)
ಟಾಯ್ಲೆಟ್‌ಗೆಂದು ಒಳ ಹೋದವನು ಟಾಯ್ಲೆಟ್ ಟ್ಯಾಂಕ್‌ನ್ನು ಎತ್ತಿಕೊಂಡು ಪರಾರಿಯಾದ ಘಟನೆ ವೆಸ್ಟ್ ಸಿಯಾಟಲ್‌ನಲ್ಲಿ ವರದಿಯಾಗಿದೆ
 
ಭಾನುವಾರ ಸಂಜೆ ತನ್ನ ಕುಟುಂಬದೊಂದಿಗೆ ವೆಸ್ಟ್ ಸಿಯಾಟಲ್‌ನ ಸಬ್ ವೇ ಹೊಟೆಲ್‌ಗೆ ಹೋದ ಒಬ್ಬ  ವ್ಯಕ್ತಿ ತಿಂಡಿಗೆ ಆರ್ಡರ್ ನೀಡಿ ರೆಸ್ಟ್ ರೂಂ ಕಡೆ ನಡೆದ. ಆದರೆ ಎಷ್ಟು ಹೊತ್ತಾದರೂ ಹೊರಗೆ ಬರಲೇ ಇಲ್ಲ.  ಕಾದು ಕಾದು ಸುಸ್ತಾದ ಆತನ ಪತ್ನಿ ಎಷ್ಟು ಸಲ ಬಾಗಿಲು ಬಡಿದರೂ ಆತ ತೆಗೆಯಲಿಲ್ಲ. ನಂತರ ಕಾದು ಬೇಸತ್ತ ಆಕೆ ಅಲ್ಲಿಂದ ಹೊರಟು ಹೋದಳು. 
 
ಅಂತಿಮವಾಗಿ ಸ್ನಾನಗೃಹದಿಂದ ಹೊರಬಂದ ಆತ, ಒಂದು ದೊಡ್ಡ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಗಡಿಬಿಡಿಯಲ್ಲಿ ಹೊಟೆಲ್‌ನಿಂದ ಹೊರಟು ಹೋದ.  
 
ರೆಸ್ಟೋರೆಂಟ್‌ನ ಕೆಲಸಗಾರರೊಬ್ಬರು ಬಾತ್ ರೂಮಿಗೆ ಹೋಗಿ ನೋಡಿದಾಗ ಅಲ್ಲಿನ ಟಾಯ್ಲೆಟ್ ಟ್ಯಾಂಕ್ ಮಿಸ್ ಆಗಿದ್ದು ಕಂಡು ಬಂತು. ಕದಿಯಲ್ಪಟ್ಟ ಶೌಚಾಲಯದ ಟ್ಯಾಂಕ್ ಮೌಲ್ಯ $ 550 ಎಂದು ಅಲ್ಲಿನ ಕೆಲಸಗಾರರು ತಿಳಿಸಿದ್ದಾರೆ. 
 
ಸಾಕ್ಷಾಧಾರಗಳು ಬಾತ್ ರೂಮಲ್ಲಿ ಬಹು ಹೊತ್ತು ಕಳೆದ ವ್ಯಕ್ತಿಯ ಕಡೆ ಶಂಕೆ ತಳೆಯುವಂತೆ ಮಾಡಿರುವುದರಿಂದ ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ.  

Share this Story:

Follow Webdunia kannada