ಮಗ್ಗಿ ಹೇಳಲು ಬರದಿದ್ದಕ್ಕೆ ಮಗಳ ಬಾಯಿಗೆ ಈರುಳ್ಳಿ ತುರುಕಿ ಕೊಲೆಗೈದ ಅಪ್ಪ

Webdunia
ಬುಧವಾರ, 13 ಜುಲೈ 2016 (08:00 IST)
ಮಗ್ಗಿ ಹೇಳಲು ಬರುವುದಿಲ್ಲವೆಂಬ ಎಂಬ ಕಾರಣಕ್ಕೆ ಕೋಪಗೊಂಡ ಪಾಪಿ ತಂದೆಯೊಬ್ಬ 6 ವರ್ಷದ ಮಗಳ ಬಾಯಿಗೆ ಈರುಳ್ಳಿ ತುರುಕಿ ಕೊಲೆಗೈದ ಆಘಾತಕಾರಿ ಘಟನೆ ಔರಂಗಾಬಾದ್‌ ಸಮೀಪದ ಬಲಾಪುರ ಗ್ರಾಮದಲ್ಲಿ ನಡೆದಿದೆ.
 
ಜುಲೈ ಒಂಬತ್ತರಂದು ಘಟನೆ ನಡೆದಿದ್ದು, ಸೋಮವಾರ ರಾತ್ರಿ ಆರೋಪಿ ರಾಜು ಕುಟೆ ಯನ್ನು ಬಂಧಿಸಲಾಗಿದೆ ಎಂದು ಚಿಕಲ್ಥಾನಾ ಪೊಲೀಸರು ತಿಳಿಸಿದ್ದಾರೆ. ಮೃತ ಬಾಲಕಿ ಭಾರತಿ ಒಂದನೇ ತರಗತಿಯಲ್ಲಿ ಓದುತ್ತಿದ್ದಳು.
 
ಭಾರತಿ ಒಂದರಿಂದ 12ರವರೆಗಿನ ಸಂಖ್ಯೆಗಳನ್ನು ಸರಿಯಾಗಿ ಹೇಳಿದಳು. ಆದರೆ ಆ ಬಳಿಕ ಎಡವಿದಳು. ಇದಕ್ಕೆ ಕೋಪಗೊಂಡ ರಾಜು
ಆಕೆಯ ಬಾಯಲ್ಲಿ ಈರುಳ್ಳಿ ತುರುಕಿದ. ಅದು ಆಕೆಯ ಗಂಟಲಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಉಸಿರುಗಟ್ಟಿದ್ದರಿಂದ ಕೆಲವೇ ಕ್ಷಣದಲ್ಲಿ ಆಕೆ ಸಾವನ್ನಪ್ಪಿದಳು. 
 
ನಂತರ ಮಗಳ ಶವವನ್ನು ಸಮೀಪದಲ್ಲಿಯೇ ಇದ್ದ ಸ್ಮಶಾನದಲ್ಲಿ ಆತ ಹೂತು ಹಾಕಿದ ಎಂದು ಘಟನೆಯ ಪ್ರತ್ಯಕ್ಷದರ್ಶಿ, ತಾಯಿ ಪತಿಯ ವಿರುದ್ಧ ದೂರು ನೀಡಿದ್ದಾಳೆ.
 
ಮೃತಳ ತಾಯಿ, ಆರೋಪಿಯ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ರಾಜುವನ್ನು ಬಂಧಿಸಲಾಗಿದೆ. ಆತನ ವಿರುದ್ಧ ಐಪಿಸಿ ವಿಭಾಗ 302 (ಕೊಲೆ) ಮತ್ತು 201 (ಅಪರಾಧದ ಸಾಕ್ಷಗಳನ್ನು ಮುಚ್ಚಿಹಾಕುವುದು ಅಥವಾ ಅಪರಾಧದ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನುದಾನದಲ್ಲಿ ವಿಪಕ್ಷಗಳ ಕ್ಷೇತ್ರಕ್ಕೆ ತಾರತಮ್ಯ ಯಾಕೆ: ಆರ್ ಅಶೋಕ್ ಗರಂ

ಗೃಹಲಕ್ಷ್ಮಿ ತಪ್ಪು ಮಾಹಿತಿ: ಕೊನೆಗೂ ಸದನಕ್ಕೆ ಬಂದು ತಪ್ಪು ಒಪ್ಪಿಕೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕುಂದಾ ತಿಂದು ಹೋಗಲು ಬಂದಿದ್ದೀರಾ ಎಂದು ಜನರು ಕೇಳುವಂತಾಗಿದೆ ಅಧಿವೇಶನ: ಛಲವಾದಿ ನಾರಾಯಣಸ್ವಾಮಿ

ಗೃಹಲಕ್ಷ್ಮಿ ಹಣ ನಡುವೆ ಎರಡು ತಿಂಗಳು ಕೊಡದಿರುವುದಕ್ಕೆ ಕಾರಣವೇನು: ಸರ್ಕಾರಕ್ಕೆ ಬಿಜೆಪಿ ಸದನದಲ್ಲಿ ಲೆಫ್ಟ್ ರೈಟ್

ಸೋನಿಯಾ ಗಾಂಧಿ ಕುಟುಂಬದ ಜೊತೆ ನಾವಿದ್ದೇವೆ: ಬೀದಿಗಿಳಿದು ಹೋರಾಟ ಮಾಡಿದ ಸಿದ್ದರಾಮಯ್ಯ ಮತ್ತು ಕೈ ನಾಯಕರು

ಮುಂದಿನ ಸುದ್ದಿ
Show comments