ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತಲೆಯಲ್ಲಿ ಹೇನು: ಪಕ್ಕದಲ್ಲಿ ಕೂತಿದ್ದವನು ಮಾಡಿದ್ದೇನು ಗೊತ್ತಾ

Krishnaveni K
ಮಂಗಳವಾರ, 6 ಆಗಸ್ಟ್ 2024 (14:24 IST)
ನವದೆಹಲಿ: ಕೆಲವೊಮ್ಮೆ ವಿಮಾನ ಪ್ರಯಾಣ ವೇಳೆ ಎಂತೆಂಥಾ ವಿಚಿತ್ರ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯ ತಲೆಯಲ್ಲಿ ಹೇನು ತುಂಬಿಕೊಂಡಿದೆ ಎಂದು ಪಕ್ಕದಲ್ಲಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.

ವಿಮಾನದಲ್ಲಿ ತನ್ನ ಪಕ್ಕದಲ್ಲಿ ಕೂತಿದ್ದ ಮಹಿಳೆಯ ತಲೆ ತುಂಬಾ ಹೇನು ನೋಡಿ ಸಹ ಪ್ರಯಾಣಿಕನಿಗೆ ಶಾಕ್ ಜೊತೆಗೆ ಹೇಸಿಗೆಯಾಗಿದೆ. ಈ ಕಾರಣಕ್ಕೆ ಆಕೆಯ ಜೊತೆ ಕೂತು ಪ್ರಯಾಣಿಸಲಾಗದೇ ಆ ವ್ಯಕ್ತಿ ವಿಮಾನವನ್ನೇ ತುರ್ತು ಭೂ ಸ್ಪರ್ಶ ಮಾಡಿಸಿದ್ದಾನೆ. ಇಂತಹದ್ದೊಂದು ಘಟನೆ ಲಾಸ್ ಏಂಜಲೀಸ್ ನಿಂದ ನ್ಯೂಯಾರ್ಕ್ ಗೆ ಪ್ರಯಾಣಿಸುತ್ತಿದ್ದ ನಡೆದಿದೆ.

ನ್ಯೂಯಾರ್ಕ್ ಗೆ ತೆರಳಬೇಕಾಗಿದ್ದ ವಿಮಾನ ಫೋನಿಕ್ಸ್ ನಲ್ಲಿ ತುರ್ತು ಭೂ ಸ್ಪರ್ಶವಾಗಿದೆ. ತನ್ನ ಪಕ್ಕದಲ್ಲೇ ಕೂತಿದ್ದ ಮಹಿಳೆಯ ತಲೆಯಲ್ಲಿ ಹೇನು ಓಡಾಡುತ್ತಿರುವುದು ನೋಡಿ ಆ ವ್ಯಕ್ತಿಗೆ ಶಾಕ್ ಆಗಿದೆ. ಆಕೆಯ ಜೊತೆ ಪ್ರಯಾಣಿಸಲು ಅಸಹನೀಯವೆನಿಸಿದೆ. ಈ ಕಾರಣಕ್ಕೆ ವಿಮಾನವನ್ನು ಭೂಸ್ಪರ್ಶ ಮಾಡುವಂತೆ ಒತ್ತಾಯಿಸಿದ್ದಾನೆ.

ಪಕ್ಕದಲ್ಲಿ ಕೂತಿದ್ದ ಮಹಿಳೆ ಪದೇ ಪದೇ ತಲೆಕೆರೆದುಕೊಳ್ಳುತ್ತಿರುವುದರಿಂದ ಆತನಿಗೆ ಅಸಹನೀಯವೆನಿಸಿತ್ತು. ಈ ಘಟನೆಯನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಒಂದು ಹೇನಿನ ಕಾರಣಕ್ಕೆ ಪ್ರಯಾಣಿಕರಿಂದ ತುಂಬಿದ್ದ ವಿಮಾನವನ್ನ ೇ ಭೂಸ್ಪರ್ಶ ಮಾಡಿರುವುದು ನಿಜಕ್ಕೂ ವಿಶೇಷ ಘಟನೆಯೇ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಡೂಟ ತಿಂದ ಬಳಿಕ ನಿಮ್ಮ ಡಯಟ್ ಹೀಗಿರಬೇಕು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ವೀರೇಶ್ ಪ್ರಕರಣಕ್ಕೆ ಟ್ವಿಸ್ಟ್

ತೇಜಸ್ವಿ ಸೂರ್ಯ ಅಮವಾಸ್ಯೆ ಆದ್ರೆ ನೀವೇನು ಹುಣ್ಣಿಮೆ ಚಂದ್ರನಾ: ಸಿದ್ದರಾಮಯ್ಯ ತೇಜಸ್ವಿ ಫ್ಯಾನ್ಸ್ ಪ್ರಶ್ನೆ

Karnataka Weather: ರಾಜ್ಯದಲ್ಲಿ ಇಂದು ಈ ಜಿಲ್ಲೆಗಳಿಗೆ ಭಾರೀ ಮಳೆ ಸಂಭವ

ಮುಂದಿನ ಸುದ್ದಿ
Show comments