Select Your Language

Notifications

webdunia
webdunia
webdunia
webdunia

ಇದು ಸತ್ಯ; ಯುವಕನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

ಇದು ಸತ್ಯ; ಯುವಕನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ
ಪೋರ್ಟ್ ಎಲಿಜಬೆತ್ , ಶನಿವಾರ, 9 ಮೇ 2015 (10:57 IST)
ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಇತ್ತೀಚಿಗೆ ಅವ್ಯಾಹತವಾಗಿ ನಡೆಯುತ್ತಿವೆ. ಆದರೆ ಪುರುಷನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದುದನ್ನು ಎಲ್ಲಾದರೂ ಕೇಳಿದ್ದೀರಾ? 

ಹೌದು ಪುರುಷನೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ನಡೆದಿರುವುದು ಲಂಡನ್‌ನಲ್ಲಿ. ಆಫ್ರಿಕಾ ಮೂಲದ ವ್ಯಕ್ತಿಯ ತಲೆಗೆ ಪಿಸ್ತೂಲು ಹಿಡಿದು ಬೆದರಿಸಿದ ಮೂವರು ಮಹಿಳೆಯರು ಆತನ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದಿದೆ. 
 
ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆದು ಹೋಗುತ್ತಿದ್ದಾಗ 33 ವರ್ಷದ ಯುವಕನ ಬಳಿ ಕಾರು ತಂದು ನಿಲ್ಲಿಸಿದ ಮೂವರು ಮಹಿಳೆಯರು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾರೆ. ನಂತರ ಆತನಿಗೆ ಗನ್ ತೋರಿಸಿ ಬೆದರಿಸಿ ಕಾರಿನಲ್ಲಿ ಹಾಕಿಕೊಂಡು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು  ಮೂವರೂ ಮಹಿಳೆಯರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 
 
ಪೀಡಿತ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು  ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Share this Story:

Follow Webdunia kannada