Select Your Language

Notifications

webdunia
webdunia
webdunia
webdunia

ಹೀಲ್ಸ್ ಹಾಕಲ್ಲ ಎಂದಿದ್ದಕ್ಕೆ ಕೆಲಸದಿಂದ ಗೇಟ್ ಪಾಸ್

ಹೀಲ್ಸ್ ಹಾಕಲ್ಲ ಎಂದಿದ್ದಕ್ಕೆ ಕೆಲಸದಿಂದ ಗೇಟ್ ಪಾಸ್
ಲಂಡನ್ , ಶನಿವಾರ, 14 ಮೇ 2016 (10:00 IST)
ಹೈ ಹಿಲ್ಸ್ ಹಾಕಲು ನಿರಾಕರಿಸಿದ್ದಕ್ಕೆ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಕೆಲಸದಿಂದ ವಜಾಗೊಳಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ

ಹ್ಯಾಕ್ನೆಯ್ ಮೂಲದ ನಿಕೊಲಾ ಥಾರ್ಪ್ (27) ಹಣಕಾಸು ಕಂಪನಿ ಪಿಡಬ್ಲುಸಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದಳು. ಅವಳಿಗೆ 4 ಇಂಚಿನ ಹೈ ಹೀಲ್ಸ್ ಶೂ ಧರಿಸುವಂತೆ ಕಂಪನಿ ಅಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಆಕೆ ಅದಕ್ಕೆ ಒಪ್ಪಿಲ್ಲ . ಹೈ ಹೀಲ್ಸ್ ಹಾಕಿಕೊಂಡು ದಿನಪೂರ್ತಿ ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂದ ಆಕೆ, ಇದೇ ರೀತಿ ಪುರುಷ ಉದ್ಯೋಗಿಗಳಿಗ್ಯಾಕೆ ನೀವು ನಿರ್ದೇಶಿಸುವುದಿಲ್ಲ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಪ್ರತಿಯಾಗಿ ಕಂಪನಿ ಆಕೆಗೆ ಸಂಬಳ ಕೊಡದೆ ಮನೆಗೆ ಕಳುಹಿಸಿದೆ. 
 
ಕಂಪನಿಯ ಅನ್ಯಾಯವನ್ನು ಸಹಿಸದಾದ ನಿಕೋಲಾ ಇದನ್ನು ಆಕ್ಷೇಪಿಸಿ ದೂರು ಸಲ್ಲಿಸಿದ್ದಾಳೆ. ಇದೀಗ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಹೈ ಹೀಲ್ಸ್ ಹಾಕುವುದನ್ನು ಕಡ್ಡಾಯ ಮಾಡುವ ಹಾಗಿಲ್ಲ ಎಂದು ಹೇಳಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅವಧಿಗಿಂತ ಮೊದಲೇ ಮಾನ್‌ಸೂನ್ : ಹವಾಮಾನ ತಜ್ಞರು