ಪೂರ್ವ ಜೆರುಸಲೆಂನಲ್ಲಿ ಸ್ಟನ್ ಗ್ರೆನೇಡ್ನಿಂದ ಮುಖಕ್ಕೆ ಗುಂಡು ತಾಗಿದ ಪತ್ರಕರ್ತೆಯೊಬ್ಬರು ಘಟನೆ ನಡೆದ ಕೂಡಲೇ ವರದಿ ಮಾಡಲು ತೆರಳಿದ ಘಟನೆ ಸಂಭವಿಸಿದೆ. ಹನಾ ಮಹಮೈಡ್ ರಾಮಲ್ಲಾ ಹೊರಗೆ ಬೇತ್ ಎಲ್ ಶಿಬಿರದ ಬಳಿ ಘರ್ಷಣೆಗಳನ್ನು ಕುರಿತು ವರದಿ ಮಾಡುತ್ತಿದ್ದಳು.
ಈ ಸಂದರ್ಭದಲ್ಲಿ ಇಸ್ರೇಲಿನ ಆಕ್ರಮಣ ಪಡೆಗಳು ಸ್ಟನ್ ಗ್ರೆನೇಡ್ಗಳು ಮತ್ತು ಅಶ್ರುವಾಯುಗಳಿಂದ ಪ್ಯಾಲೇಸ್ಟೀನ್ ಪತ್ರಕರ್ತರ ಮೇಲೆ ಗುರಿ ಇರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಟನ್ ಗ್ರೇನೇಡ್ ಗುಂಡು ಮಹಮೇಡ್ ಮುಖಕ್ಕೆ ತಾಗಿ ಗಾಯವಾಗಿತ್ತು.
ವಿಡಿಯೊದಲ್ಲಿ ಮಹಮೇಡ್ ಅಲ್ - ಮಯಾದೀನ್ಗೆ ನೇರ ಪ್ರಸಾರದಲ್ಲಿ ಅವಳ ಮುಖವು ಬ್ಯಾಂಡೇಜ್ನಿಂದ ಪೂರ್ಣ ಮುಚ್ಚಿದ್ದರೂ ವರದಿ ಮಾಡುತ್ತಿರುವುದನ್ನು ತೋರಿಸಿದೆ.