Select Your Language

Notifications

webdunia
webdunia
webdunia
webdunia

ಇರಾನ್ ಅಧ್ಯಕ್ಷರ ಭೇಟಿ : ಮಹಿಳೆಯರ ನಗ್ನ ಪ್ರತಿಮೆಗಳನ್ನು ಮರೆಮಾಡಿದ ಇಟಲಿ ಪ್ರಧಾನಿ

ಇರಾನ್ ಅಧ್ಯಕ್ಷರ ಭೇಟಿ :  ಮಹಿಳೆಯರ ನಗ್ನ ಪ್ರತಿಮೆಗಳನ್ನು ಮರೆಮಾಡಿದ ಇಟಲಿ ಪ್ರಧಾನಿ
ರೋಮ್: , ಸೋಮವಾರ, 22 ಫೆಬ್ರವರಿ 2016 (15:37 IST)
ಇಟಲಿ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರಿಗೆ ಉಂಟಾಗುವ ಮುಜುಗರ ತಪ್ಪಿಸಲು ರೋಮ್ ಕ್ಯಾಪಿಟೋಲೈನ್ ಮ್ಯೂಸಿಯಂನಲ್ಲಿರುವ ಪ್ರಾಚೀನ ನಗ್ನ ಪ್ರತಿಮೆಗಳನ್ನು ಕಾಣದಂತೆ ಮರೆಮಾಡಿದ ಇಟಲಿ ಪ್ರಧಾನಿ ಮ್ಯಾಟಿಯೋ ರೆಂಝಿ ಕ್ರಮವನ್ನು ಪ್ರತಿಪಕ್ಷದ ಮುಖಂಡರು ವ್ಯಾಪಕವಾಗಿ ಟೀಕಿಸಿದ್ದಾರೆ.

ಸೋಮವಾರ ಇರಾನ್ ನಿಯೋಗದ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಇಟಲಿ ಮತ್ತು ಇರಾನ್ 17 ಶತಕೋಟಿ ಯೂರೋ ಉದ್ಯಮ ಒಪ್ಪಂದಗಳಿಗೆ ಸಹಿ ಹಾಕಲಿವೆ. ಆದರೆ ರೆಂಝಿ ತಮ್ಮ ಅತಿಥಿಯನ್ನು ಸಂತೋಷವಾಗಿಡಲು ಮಿತಿ ಮೀರಿ ವರ್ತಿಸುತ್ತಿದ್ದಾರೆಂದು ಪ್ರತಿಪಕ್ಷಗಳು ಟೀಕಿಸಿವೆ.
 
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇರಾನ್ ಮಾನವ ಹಕ್ಕು ಉಲ್ಲಂಘನೆ ದಾಖಲೆ ಕುರಿತು ಯಾವುದೇ ಉಲ್ಲೇಖವನ್ನು ರೆಂಝಿ ಮಾಡಲಿಲ್ಲ. ಇದಲ್ಲದೇ ಪಾರಂಪರಿಕವಾದ ಮಹಿಳೆಯರ ನಗ್ನ ಪ್ರತಿಮೆಗಳನ್ನು ಮರೆಮಾಚುವ ಮೂಲಕ ಇಟಲಿಯ ಸಾಂಸ್ಕೃತಿಕ ಗುರುತನ್ನು ಬಲಿಕೊಟ್ಟಿದ್ದಾರೆಂದು ಪ್ರತಿಪಕ್ಷದ ಸದಸ್ಯರು ಟೀಕಿಸಿದರು. 

ಇತರೆ ಸಂಸ್ಕೃತಿಗಳಿಗೆ ಗೌರವಿಸುವುದೆಂದರೆ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಬೇಕೆಂದು ಅರ್ಥವಲ್ಲ. ಇದು ನಾವು ನೀಡುವ ಗೌರವವಲ್ಲ. ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದು ರೀತಿಯಲ್ಲಿ ಶರಣಾಗುವುದಾಗಿದೆ ಎಂದು ಫೋರ್ಜಾ ಇಟಾಲಿಯಾ ಪಕ್ಷದ ಸಂಸದ ಲೂಕಾ ಸ್ಕ್ವೇರಿ ಹೇಳಿದ್ದಾರೆ.

Share this Story:

Follow Webdunia kannada