Select Your Language

Notifications

webdunia
webdunia
webdunia
webdunia

ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಓಮರ್ ಸಾವು: ದೃಢಪಡಿಸಿದ ಪೆಂಟಗನ್

ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಓಮರ್ ಸಾವು:  ದೃಢಪಡಿಸಿದ ಪೆಂಟಗನ್
ಪೆಂಟಗನ್ , ಮಂಗಳವಾರ, 15 ಮಾರ್ಚ್ 2016 (16:01 IST)
ಇಸ್ಲಾಮಿಕ್ ಸ್ಟೇಟ್ ಕಮಾಂಡರ್ ಓಮರ್ ಅಲ್-ಶಿಶಾನಿ ಮೃತಪಟ್ಟಿದ್ದಾನೆಂದು ಪೆಂಟಗನ್ ಇಂದು ದೃಢಪಡಿಸಿದೆ.  ಮಿನಿಸ್ಟರ್ ಆಫ್ ವಾರ್ ಎಂದು ಪೆಂಟಗನ್ ಪರಿಗಣಿಸಿರುವ ಓಮರ್ ಕಳೆದ ಮಾರ್ಚ್ 4ರಂದು ಅಮೆರಿಕ ನೇತೃತ್ವದ ಮಿತ್ರಪಡೆಗಳು ಈಶಾನ್ಯ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ ತೀವ್ರಗಾಯಗಳಿಂದ ಮೃತಪಟ್ಟಿದ್ದಾನೆ.
 
ಚಾಲಕಸಹಿತ ಮತ್ತು ಚಾಲಕರಹಿತ ವಿಮಾನಗಳಿಂದ ನಡೆಸಿದ ಬಹು ದಾಳಿಗಳಲ್ಲಿ ಶಿಶಾನಿಯ ಮೇಲೆ ಗುರಿಇರಿಸಲಾಗಿದ್ದು, ಅವನು ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ಪೆಂಟಗನ್ ವಕ್ತಾರ ನೌಕಾದಳದ ನಾಯಕ ಜೆಫ್ ಡೇವಿಸ್ ತಿಳಿಸಿದರು. 
 
ಓಮರ್ ದಿ ಚೆಚನ್ ಎಂದು ಹೆಸರಾದ ಓಮರ್ ಅನೇಕ ದಿನಗಳ ಕಾಲ ಬ್ರೇನ್ ಡೆಡ್ ಸ್ಥಿತಿಯಲ್ಲಿದ್ದರು ಎಂದು ಸಿರಿಯಾದ ಮಾನವ ಹಕ್ಕು ವೀಕ್ಷಣಾಲಯ ತಿಳಿಸಿದೆ. ಶಿಶಾನಿ ಐಎಸ್ ನಾಯಕರಲ್ಲಿ ಒಬ್ಬರಾಗಿದ್ದು ಅವರ ತಲೆಗೆ 5 ದಶಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿತ್ತು. 

Share this Story:

Follow Webdunia kannada