Webdunia - Bharat's app for daily news and videos

Install App

ಶ್ವೇತ ಭವನದಲ್ಲಿ ಒಬಾಮಾ ತಲೆ ಕತ್ತರಿಸುತ್ತೇವೆ -ಐಸಿಸ್ ಬೆದರಿಕೆ

Webdunia
ಗುರುವಾರ, 29 ಜನವರಿ 2015 (12:20 IST)
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತಭನಕ್ಕೆ ನುಗ್ಗಿ ನಿನ್ನ ತಲೆ ಕತ್ತರಿಸುತ್ತೇವೆ ಎಂದು ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಬೆದರಿಕೆ ನೀಡಿ ಐಸಿಸ್ ಉಗ್ರರು ಜನವರಿ 26 ರಂದು ವಿಡಿಯೋ ಒಂದನ್ನು ಪ್ರಕಟಿಸಿದ್ದಾರೆ.


ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿರುವ ಐಸಿಸ್ ಉಗ್ರನೊಬ್ಬ ಇರಾಕ್‌ನ ಎರಡನೇ ಅತ್ಯಂತ ದೊಡ್ಡ ನಗರ ಮೊಸುಲ್ ಬೀದಿಗಳಲ್ಲಿ ನಿಂತು ಶ್ವೇತಭವನದಲ್ಲಿ ಒಬಾಮಾ ತಲೆ ಕತ್ತರಿಸುವುದಾಗಿ ಹೇಳುತ್ತಿದ್ದಾನೆ. ಆತ ತನ್ನ ಕೈಯ್ಯಲ್ಲಿ ಕುರ್ದಿಶ್ ಸೈನಿಕನೊಬ್ಬನನ್ನು ಮತ್ತು ಕತ್ತಿಯನ್ನು ಹಿಡಿದಿದ್ದು  ಅಮೆರಿಕವನ್ನು ನಾವು ಮುಸ್ಲಿಂ ದೇಶವನ್ನಾಗಿ ಬದಲಾಯಿಸುತ್ತೇವೆ ಎಂದು ಪ್ರತಿಜ್ಞೆಯನ್ನೂ ಮಾಡಿದ್ದಾನೆ.

"ಓ ಒಬಾಮ ಇದನ್ನು ತಿಳಿದುಕೋ. ನಾವು ಅಮೇರಿಕಾಕ್ಕೆ ಬರುತ್ತಿದ್ದೇವೆ. ವೈಟ್‌ಹೌಸ್'ನಲ್ಲಿ ನಿನ್ನ ತಲೆಯನ್ನ ಕತ್ತರಿಸುತ್ತೇವೆ. ಅಮೆರಿಕವನ್ನು ಮುಸ್ಲಿಂ ಪ್ರಾಂತ್ಯವನ್ನಾಗಿ ಪರಿವರ್ತಿಸುತ್ತೇವೆ.  ಮುಸ್ಲಿಮ್  ಧರ್ಮವನ್ನು ಯಾರಾದರೂ ವಿರೋಧಿಸಿದರೆ ಅವರಿಗೆ ಆಗುವುದು ಇದೇ ಗತಿ", ಎಂದು ಈ ಉಗ್ರ ಎಚ್ಚರಿಕೆ ನೀಡಿದ್ದಾನೆ.

ಫ್ರಾನ್ಸ್ ಮತ್ತು ಬೆಲ್ಜಿಯಂ ದೇಶಗಳಿಗೂ ಎಚ್ಚರಿಕೆ ನೀಡಿರುವ ಈ ಉಗ್ರ ಕಾರ್ ಬಾಂಬುಗಳು ಹಾಗೂ ಸ್ಫೋಟಕಗಳೊಂದಿಗೆ ನಿಮ್ಮ ದೇಶಕ್ಕೆ ಬರುತ್ತೇವೆ. ತಲೆಗಳನ್ನು ಕತ್ತರಿಸಿ ಹಾಕುತ್ತೇವೆ ಎಂದು ಹೇಳಿದ್ದಾನೆ. ಬಳಿಕ, ಪೈಶಾಚಿಕವಾಗಿ ಕುರ್ದಿಶ್ ಸೈನಿಕನ ತಲೆಯನ್ನು ಚಾಕುವಿನಿಂದ ಕತ್ತರಿಸಿ ಬಿಸಾಡಿದ್ದಾನೆ.



ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments