Webdunia - Bharat's app for daily news and videos

Install App

ಯುವತಿ ತಲೆಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಐಸಿಸ್

Webdunia
ಮಂಗಳವಾರ, 20 ಡಿಸೆಂಬರ್ 2016 (12:21 IST)
ತಮ್ಮ ವಿರುದ್ಧ ಹೋರಾಡುತ್ತಿರುವ ಕುರ್ದಿಷ್ ಡ್ಯಾನಿಶ್ ಯುವತಿಗೆ ಜಗತ್ತಿನ ಅತಿ ಅಪಾಯಕಾರಿ ಭಯೋತ್ಪಾದಕ ಸಂಘಟನೆ ಎನಿಸಿಕೊಂಡಿರುವ ಐಸಿಸ್ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. 

ಮಹಿಳೆಯರ ಹಕ್ಕು ಮತ್ತು ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಗುರಿಯನ್ನಿಟ್ಟುಕೊಂಡಿರುವ ಕುರ್ದಿಷ್- ಡ್ಯಾನಿಶ್ ಯುವತಿ ಜೊಅನ್ನಾ ಪಲಾನಿ (23) ಸಿರಿಯಾ ಮತ್ತು ಇರಾಕ್‌ನಲ್ಲಿ ಉಗ್ರ ಸಂಘಟನೆ ವಿರುದ್ಧ ಹೋರಾಡುವ ಉದ್ದೇಶದಿಂದ 2014ರಲ್ಲಿ ಪದವಿ ವಿದ್ಯಾಭ್ಯಾಸವನ್ನು ತ್ಯಜಿಸಿದ್ದರು. 
 
ಸದ್ಯ ಕೋಪನ್‌ಹೆಗನ್‌ನ ಜೈಲಿನಲ್ಲಿ ಬಂಧಿಯಾಗಿರುವ ಆಕೆ ನ್ಯಾಯಾಲಯದಲ್ಲಿ ವಿಚಾರಣೆಯನ್ನೆದುರಿಸುತ್ತಿದ್ದಾರೆ. ಕುರ್ದಿಷ್ ಕ್ರಾಂತಿಗೆ ಕೈ ಜೋಡಿಸಿದ್ದ ಆಕೆಗೆ ಜೂನ್ 2015ರಲ್ಲಿ ಆಕೆಗೆ 12 ತಿಂಗಳು ದೇಶ ಬಿಟ್ಟು ಹೋಗದಂತೆ ಡೆನ್ಮಾರ್ಕ್ ಸರ್ಕಾರ ಆದೇಶಿಸಿತ್ತು. ಆದರೆ ಆಕೆ ಈ ಆದೇಶವನ್ನು ಉಲ್ಲಂಘಿಸಿದ್ದರಿಂದ ಜೈಲು ಪಾಲಾಗಿದ್ದಾಳೆ. ಇಂದಿನಿಂದ ಆಕೆಯ ಪ್ರಕರಣದ ವಿಚಾರಣೆ ಪ್ರಾರಂಭವಾಗಲಿದ್ದು ತಪ್ಪು ಸಾಬೀತಾದರೆ ಮಧ್ಯಪ್ರಾಚ್ಯ ಡೆನ್ಮಾರ್ಕ್‌ನಿಂದ ಐಸಿಸ್ ಉಗ್ರಗಾಮಿಗಳನ್ನು ನಿಗ್ರಹಿಸಲು ರಚಿಸಲಾದ ಹೊಸ ಕಾನೂನಿನ ಪ್ರಕಾರ ಆಕೆಗೆ ಎರಡು ವರ್ಷ ಜೈಲು ಶಿಕ್ಷೆಯಾಗಬಹುದು. 
 
ಡೆನ್ಮಾರ್ಕ್‌ಗೆ ಹಿಂತಿರುಗಿದ್ದಾಗಿನಿಂದ ಪಲಾನಿ ಜೀವಬೆದರಿಕೆಯನ್ನು ಎದುರಿಸುತ್ತಲೇ ಇದ್ದಾರೆ. ಮತ್ತೀಗ ಐಸಿಸ್ ಸಾಮಾಜಿಕ ಮಾಧ್ಯಮ‌ಗಳು ಆಕೆಯ ಹತ್ಯೆಗೆ 1 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿವೆ. ಉಗ್ರ ಸಂಘಟನೆ ವಿವಿಧ ಭಾಷೆಗಳಲ್ಲಿ ಈ ಪೋಸ್ಟ್‌ನ್ನು ಪ್ರಕಟಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments