Select Your Language

Notifications

webdunia
webdunia
webdunia
webdunia

ಐಸಿಸ್ ನಿರ್ದಯ ನರಮೇಧಗಳನ್ನು ನಡೆಸುತ್ತಿರುವುದೇಕೆ?

ಐಸಿಸ್ ನಿರ್ದಯ ನರಮೇಧಗಳನ್ನು ನಡೆಸುತ್ತಿರುವುದೇಕೆ?
ಸಿರಿಯಾ , ಬುಧವಾರ, 25 ಫೆಬ್ರವರಿ 2015 (19:08 IST)
ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ಸ್ಟೇಟ್  ಭಯೋತ್ಪಾದಕ ಸಂಘಟನೆ ಸುದೀರ್ಘ ಕಾಲ ಹೋರಾಟ ಮಾಡುತ್ತಿರುವ ಯಶಸ್ಸಿಗೆ ಅತ್ಯಾಧುನಿಕ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಿರುವುದು ಕಾರಣವೆಂದು ತಜ್ಞರು ಹೇಳಿದ್ದಾರೆ. ಇದಲ್ಲದೇ ಮಾನವ ಅಂಗಾಂಗಗಳ ಮಾರಾಟದ ಮೂಲಕ ಅವರು ಹಣ ಸಂಪಾದಿಸುತ್ತಿರುವ ಆಘಾತಕಾರಿ ಸಂಗತಿ ಕೂಡ ಬೆಳಕಿಗೆ ಬಂದಿದೆ.

ಐಸಿಸಿ ಭದ್ರಕೋಟೆ ಮೊಸುಲ್‌ನಲ್ಲಿ ಶಸ್ತ್ರಕ್ರಿಯೆ ಮಾಡಿದ , ನಾಪತ್ತೆಯಾದ ಮೂತ್ರಪಿಂಡಗಳು ಅಥವಾ ಇತರ ಭಾಗಗಳು ನಾಪತ್ತೆಯಾದ ಶವಗಳು ಸಾಮೂಹಿಕ ಗೋರಿಗಳಲ್ಲಿ ಪತ್ತೆಯಾಗಿವೆ ಎಂದು ಇರಾಕ್ ರಾಯಭಾರಿ ಮಹಮ್ಮದ್ ಅಲಾಕಿಮ್ ಆಘಾತಕಾರಿ ಸುದ್ದಿಯನ್ನು ಹೊರಗೆಡವಿದ್ದು ಇದಕ್ಕೆ ಪುಷ್ಠಿಯೊದಗಿಸಿದೆ. ದೇಹದ ಅಂಗಾಂಗಗಳನ್ನು ಬೇರ್ಪಡಿಸಲು ಉಗ್ರಗಾಮಿ ಸಂಘಟನೆ ಕೆಲವು ವೈದ್ಯರನ್ನು ಕೂಡ ಈ ಕಾರ್ಯಕ್ಕೆ ನೇಮಿಸಿಕೊಂಡಿದೆ ಎಂದು ವರದಿಗಳು ಹೇಳಿವೆ. 
 
ಇಸ್ಲಾಮಿಕ್ ಸ್ಟೇಟ್‌ನ ಆದಾಯ ಮೂಲಗಳ ಬಗ್ಗೆ ಸಿಎನ್‌ಎನ್ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿದೆ. ಉತ್ತರ ಇರಾಕ್ ಮತ್ತು ಉತ್ತರ ಸಿರಿಯಾದ ತೈಲ ಸಂಸ್ಕರಣಾಗಾರಗಳು ಮತ್ತು ಬಾವಿಗಳಿಂದ ತೆಗೆಯುವ ತೈಲವನ್ನು ಮಾರಿ ಪ್ರತಿದಿನ 1 ದಶಲಕ್ಷದಿಂದ 2 ದಶಲಕ್ಷ ಡಾಲರ್ ಹಣವನ್ನು ಅದು ಸಂಪಾದಿಸುತ್ತಿದೆ. ಐಸಿಸ್ ಸಿರಿಯಾದಲ್ಲಿ ದಿನವೊಂದಕ್ಕೆ 44,000 ಬ್ಯಾರೆಲ್ ಮತ್ತು ಇರಾಕ್‌ನಲ್ಲಿ 4000 ಬ್ಯಾರೆಲ್ ತೈಲ ಉತ್ಪಾದನೆ ಮಾಡುತ್ತಿದೆ.

ಇವುಗಳ ಜೊತೆಗೆ ಈ ಸಂಘಟನೆ ಮೊಸುಲ್‌ನ ಅನೇಕ ಬ್ಯಾಂಕ್‌ಗಳ ಮೇಲೆ ದಾಳಿ ಮಾಡಿ ಅಂದಾಜು 500 ದಶಲಕ್ಷ ಡಾಲರ್ ಹಣವನ್ನು  ದರೋಡೆ ಮಾಡಿದೆ. ಈ ಸಂಘಟನೆಯ ಹಣಕಾಸಿನ ಇನ್ನೊಂದು ಮೂಲ ತನ್ನ ಪ್ರದೇಶದ ನಿವಾಸಿಗಳಿಗೆ ರಾಜಧನ ವಿಧಿಸುವುದು. ಸೇವೆ ಮತ್ತು ರಕ್ಷಣಾ ಶುಲ್ಕವಾಗಿ ಪ್ರತಿಯೊಂದು ಕುಟುಂಬದಿಂದ 50,000 ದಿನಾರ್‌ಗಳನ್ನು ವಸೂಲಿ ಮಾಡುತ್ತಿದೆ.

ಇದಲ್ಲದೇ ಅಲ್ ಖೈದಾ ಜೊತೆ ಒಂದೊಮ್ಮೆ ಕೈಗೂಡಿಸಿದ್ದ ಇದು ಒತ್ತೆಹಣದ ಮೂಲಕ ಬೃಹತ್ ಹಣ ಸಂಪಾದಿಸುತ್ತಿದೆ. ಐಸಿಸಿ ಅಪಹರಿಸಿದ ನೌಕರನೊಬ್ಬನ ಬಿಡುಗಡೆಗೆ ಸ್ವೀಡಿಶ್ ಕಂಪನಿ 70,000 ಡಾಲರ್ ಪಾವತಿ ಮಾಡಿದೆ. ಹೀಗೆ ವಿವಿಧ ಮೂಲಗಳಿಂದ ಅಕ್ರಮವಾಗಿ ಹಣ ಸಂಪಾದಿಸಿ ಇಡೀ ವಿಶ್ವಕ್ಕೆ ಐಸಿಸ್ ಬೆದರಿಕೆಯೊಡ್ಡಿದೆ. 

Share this Story:

Follow Webdunia kannada