Select Your Language

Notifications

webdunia
webdunia
webdunia
webdunia

ಮತಾಂತರವಾಗದಿದ್ದಕ್ಕೆ 30 ಜನರ ಶಿರಚ್ಛೇದ

ಮತಾಂತರವಾಗದಿದ್ದಕ್ಕೆ 30 ಜನರ ಶಿರಚ್ಛೇದ
ಲಿಬಿಯಾ , ಸೋಮವಾರ, 20 ಏಪ್ರಿಲ್ 2015 (14:16 IST)
ಐಸಿಸ್ ಭಯೋತ್ಪಾದಕರ ಅಟ್ಟಹಾಸಕ್ಕೆ ತಡೆಯೇ ಇಲ್ಲದಂತಾಗಿದೆ. ಶಿರಚ್ಛೇದದ ವಿಡಿಯೋ ಬಿಡುಗಡೆ ಮಾಡಿ ವಿಶ್ವದಾದ್ಯಂತ ಭೀತಿಯನ್ನು ಹುಟ್ಟಿಸುತ್ತಿರುವ ಅವರ ಕ್ರೌರ್ಯಕ್ಕೆ ಈಗ ಇಥಿಯೋಪಿಯಾದ 30 ಕ್ರೈಸ್ತರು ಬಲಿಯಾಗಿದ್ದಾರೆ.

ಇಥಿಯೋಪಿಯಾದ ಕ್ರೈಸ್ತರು ಎಂದು ಊಹಿಸಲಾಗಿರುವ 30 ಜನರ ಶಿರಚ್ಛೇದ ಮಾಡಿದ ವಿಡಿಯೊ ಒಂದನ್ನು ಐಸಿಸ್ ಉಗ್ರರು ಬಿಡುಗಡೆ ಮಾಡಿದ್ದಾರೆ. 29 ನಿಮಿಷಗಳ ವಿಡಿಯೊದಲ್ಲಿ ಬಂಧಿಸಿಟ್ಟಿದ್ದ ಕೈದಿಗಳ ಎರಡು ಗುಂಪುಗಳ ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ. ಒಂದು ಗುಂಪು ಕೇಸರಿ ಬಟ್ಟೆಗಳನ್ನು ಧರಿಸಿದ್ದರೆ, ಇನ್ನೊಂದು ಕಪ್ಪು ಬಟ್ಟೆಯನ್ನು ಧರಿಸಿದೆ. 
 
ಮುಖಕ್ಕೆ ಕಪ್ಪು ಬಟ್ಟೆ ಸುತ್ತಿಕೊಂಡು ಕೈಯಲ್ಲಿ ಪಿಸ್ತೂಲ್‌ ಹಿಡಿದುಕೊಂಡಿರುವ ಉಗ್ರರು, ‘ ನಮ್ಮದು ನಂಬಿಕೆ ಮತ್ತು ದೈವನಿಂದನೆ , ಸತ್ಯ ಮತ್ತು ಸುಳ್ಳಿನ ನಡುವಿನ ಹೋರಾಟ. ಕ್ರೈಸ್ತರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಅದಕ್ಕೊಪ್ಪದಿದ್ದರೆ ಬೆಲೆ ತೆರಬೇಕು ಎಂದು ಹೇಳಿ ಸಮಯವನ್ನು ನಿಗದಿ ಪಡಿಸಿದ್ದೆವು. ಆದರೆ ಅವರು ಮತಾಂತರಕ್ಕೆ ಒಪ್ಪಿಲ್ಲ. ಹಾಗಾಗಿ ನಾವು ಹೇಳಿದಂತೆ ನಡೆದಿದ್ದೇವೆ, ಕ್ರೈಸ್ತರು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವವರೆಗೂ ಹತ್ಯೆ ನಿಲ್ಲದು’ ಎಂಬ ಹೇಳಿಕೆ ನೀಡಿದ್ದಾರೆ.
 
"ನೀವು ಶೇಖ್ ಒಸಾಮಾ ಬಿನ್ ಲಾಡೆನ್ ದೇಹವನ್ನು ಸಮುದ್ರಕ್ಕೆಸೆದಿದ್ದೀರಿ, ನಿಮ್ಮ ರಕ್ತವನ್ನು ಅದರೊಂದಿಗೆ ಬೆರೆಸುತ್ತೇವೆ ಎಂದು ನಾವು ಅಲ್ಲಾನಿಗೆ ವಾಗ್ದಾನ ಮಾಡಿದ್ದೇವೆ", ಎಂದು ಸಹ ವಿಡಿಯೋದಲ್ಲಿ ಹೇಳಲಾಗಿದೆ.

Share this Story:

Follow Webdunia kannada