ಕಾಶ್ಮಿರದ ಪ್ರತ್ಯೇಕತಾವಾದಿಗಳಿಗೆ ಇರಾನ್ ಬೆಂಬಲ ವ್ಯಕ್ತಪಡಿಸಿರುವುದು ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗೆ ಹಿನ್ನೆಡೆಯಾದಂತಾಗಿದೆ.
ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಮುಂದಾಗಿರುವಂತೆಯೇ ಇರಾನ್ ತನ್ನ ಭಾರತ ವಿರೋಧಿ ನಿಲುವನ್ನು ಪ್ರಕಟಿಸಿದೆ.
ಕಾಶ್ಮಿರದ ಮುಸ್ಲಿಮರಿಗೆ ವಿಶ್ವದ ಮುಸ್ಲಿಮರು ಬೆಂಬಲ ಸೂಚಿಸಬೇಕು ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಲಿ ಹುಸೇನಿ ಖೋಮೇನಿ ಟ್ವಿಟ್ ಮಾಡಿದ್ದಾರೆ.
ಭಾರತ ಮತ್ತು ಇರಾನ್ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧವಿದ್ದರೂ, ಇದೀಗ ಇರಾನ್ ಮುಖಂಡ ಖೋಮೇನಿ ಟ್ವಿಟ್‌ನಿಂದಾಗಿ ಉಭಯ ದೇಶಗಳ ಮಧ್ಯೆ ಇಕ್ಕಟ್ಟಿನ ಸ್ಥಿತಿ ಎದುರಾಗಲಿದೆ ಎಂದು ವಿದೇಶಾಂಗ ನೀತಿ ತಜ್ಞರು ತಿಳಿಸಿದ್ದಾರೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.