Select Your Language

Notifications

webdunia
webdunia
webdunia
webdunia

ಅಮೇರಿಕಾ: ಕರಡಿ ದಾಳಿಗೆ ಭಾರತೀಯ ಮೂಲದ ಯುವಕ ಬಲಿ

ಅಮೇರಿಕಾ: ಕರಡಿ ದಾಳಿಗೆ ಭಾರತೀಯ ಮೂಲದ ಯುವಕ  ಬಲಿ
ನ್ಯೂಯಾರ್ಕ್ , ಮಂಗಳವಾರ, 30 ಸೆಪ್ಟಂಬರ್ 2014 (11:10 IST)
22 ವರ್ಷದ ಭಾರತೀಯ ಮೂಲದ ಯುವಕನೊಬ್ಬ ಕರಡಿ ದಾಳಿಗೆ ಸಿಲುಕಿ ದುರ್ಮರಣವನ್ನಪ್ಪಿದ ಘಟನೆ ನ್ಯೂಯಾರ್ಕ್ ನಗರದ ರಕ್ಷಿತಾರಣ್ಯದ ಬಳಿ ನಡೆದಿದೆ.

ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ದರ್ಶ್ ಪಟೇಲ್ ರಕ್ಷಿತಾರಣ್ಯವನ್ನು ಸುತ್ತಾಡಲು ಹೋದಾಗ ಈ ಘಟನೆ ನಡೆದಿದೆ ಎಂದು ವೆಸ್ಟ್ ಮಿಲ್ಫೋರ್ಡ್ ಪೊಲೀಸ್ ಮುಖ್ಯಸ್ಥ ತಿಮೋತಿ ಸ್ಟೋರ್ಬೆಕ್ ತಿಳಿಸಿದ್ದಾರೆ. 
 
ಕರಡಿಯೊಂದು ತಮ್ಮನ್ನು ಅನುಸರಿಸುತ್ತಿರುವುದನ್ನು ಗಮನಿಸಿದ ಐದು ಸ್ನೇಹಿತರು ಅದರಿಂದ ತಪ್ಪಿಸಿಕೊಳ್ಳಲು ಓಡಲು ಪ್ರಾರಂಭಿಸಿದ್ದಾರೆ. 
 
ದುರದೃಷ್ಟವಶಾತ್ ಪಟೇಲ್, ಕರಡಿ ಹಿಡಿತಕ್ಕೆ ಸಿಲುಕಿಕೊಂಡ, ಮತ್ತದು ಅವನನ್ನು ಕೊಂದುಹಾಕಿತು.ಕರಡಿಗೆ ಹೆದರಿ ಬೇರೆ ಬೇರೆ ದಿಕ್ಕಿಗೆ ಓಡಿದ್ದ ನಾಲ್ಕು ಸ್ನೇಹಿತರು ಹಿಂತಿರುಗಿ ಬಂದು ಎಷ್ಟು ಹುಡುಕಿದರೂ ದರ್ಶ್ ಕಾಣದಾದಾಗ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಎರಡು ಗಂಟೆಗಳ ನಂತರ ಆತನ ಮೃತ ದೇಹವನ್ನು ಪತ್ತೆಹಚ್ಚುವಲ್ಲಿ ಪೋಲಿಸರು ಯಶಸ್ವಿಯಾದರು. ಆಗಲೂ ಸಹ ಕರಡಿ  ದರ್ಶ್ ಮೃತ ದೇಹವನ್ನು ಸುತ್ತು ಹಾಕುತ್ತಿತ್ತು ಎಂದು ಪೋಲಿಸರು ತಿಳಿಸಿದ್ದಾರೆ. 
 
ಕರಡಿಯನ್ನು ಅಲ್ಲಿಂದ ಓಡಿಸಲು ಪೋಲಿಸರು ದೊಡ್ಡ ಶಬ್ಧವನ್ನು ಮಾಡಿದರು ಮತ್ತು ಕೋಲು ಮತ್ತು ಕಲ್ಲುಗಳನ್ನು ಅದರೆಡೆಗೆ ಬೀಸಾಡಿದರು. ಆದರೆ ಅದ್ಯಾಯುವುದಕ್ಕೂ ಕರಡಿ ಜಗ್ಗದಾದಾಗ ಪಟೇಲ್ ದೇಹವನ್ನು ಪಡೆಯುವ ಉದ್ದೇಶದಿಂದ ಪೋಲಿಸರು ಕರಡಿಯನ್ನು ಕೊಂದು ಹಾಕಿದರು. 
 
ಪಟೇಲ್ ರಟ್ಜರ್ಸ್ ವಿಶ್ವವಿದ್ಯಾಲಯದ ಮಾಹಿತಿ ತಂತ್ರಜ್ಞಾನ ಮತ್ತು ಇನ್ಫರ್ಮ್ಯಾಟಿಕ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. 

Share this Story:

Follow Webdunia kannada