Select Your Language

Notifications

webdunia
webdunia
webdunia
webdunia

ಪುತ್ರಿಯ ಮದುವೆಗೆ ಅಮೆರಿಕಕ್ಕೆ ತೆರಳಿದ್ದ ಭಾರತೀಯ ಶವವಾಗಿ ಪತ್ತೆ

ಪುತ್ರಿಯ ಮದುವೆಗೆ ಅಮೆರಿಕಕ್ಕೆ ತೆರಳಿದ್ದ ಭಾರತೀಯ ಶವವಾಗಿ ಪತ್ತೆ
ಲಾಸ್ ಏಂಜಲೀಸ್: , ಗುರುವಾರ, 25 ಫೆಬ್ರವರಿ 2016 (13:28 IST)
ಅಮೆರಿಕಕ್ಕೆ ತನ್ನ ಪುತ್ರಿಯ ಮದುವೆ ಆರತಕ್ಷತೆಗೆ ಭೇಟಿಯಾಗಿದ್ದ 55 ವರ್ಷದ ವ್ಯಕ್ತಿಯ ದೇಹ ಇಲ್ಲಿನ ಜಲಮಾರ್ಗದಲ್ಲಿ ಪತ್ತೆಯಾಗಿದೆ. ಫೆ. 13ರಂದು ಮದುವೆ ಆರತಕ್ಷತೆಗೆ ಹಾಜರಾಗಿದ್ದ ಪ್ರಸಾದ್ ಮೊಪಾರ್ತಿ ದೇಹವು ಅಲ್ಲಿಂದ 8 ಕಿಮೀ ದೂರದ ಜಲಮಾರ್ಗದಲ್ಲಿ ಸೋಮವಾರ ಪತ್ತೆಯಾಗಿದೆ. ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲವಾದ್ದರಿಂದ ಸಾವಿಗೆ ಕಾರಣವನ್ನು ಇನ್ನೂ ನಿರ್ಧರಿಸಬೇಕಿದೆ.
 
ಆ ಜಲಮಾರ್ಗದಲ್ಲಿ ದೋಣಿ ನಡೆಸುವವ ಮೊಪಾರ್ತಿ ದೇಹವನ್ನು ಪತ್ತೆಹಚ್ಚಿದ್ದು, ಸಿಬ್ಬಂದಿ ಕೂಡಲೇ ನೀರಿನಿಂದ ಅವರ ದೇಹವನ್ನು ಹೊರತೆಗೆದರು.  ಪುತ್ರಿಯ ಮದುವೆಯಲ್ಲಿ ಭಾಗವಹಿಸಲು ಹೈದರಾಬಾದ್‌ನಿಂದ ಜನವರಿಯಲ್ಲಿ ಇಲ್ಲಿಗೆ ಆಗಮಿಸಿದ್ದ ಮೊಪಾರ್ತಿ ಫೆ. 13ರಂದು ನಾಪತ್ತೆಯಾಗಿದ್ದರು.  

ಉತ್ತರ ಕ್ಯಾಲಿಫೋರ್ನಿಯಾದ ಗ್ರಾಂಡ್ ಐಲೆಂಡ್ ಮ್ಯಾನ್ಷನ್‌ನಲ್ಲಿ ತನ್ನ ಪುತ್ರಿಯ ಮದುವೆ ಆರತಕ್ಷತೆ ಸಮಾರಂಭದಿಂದ ನಿರ್ಗಮಿಸಿದ್ದ ಅವರು ಪುನಃ ಹಿಂತಿರುಗಿರಲಿಲ್ಲ. ಸಮಾರಂಭಕ್ಕೆ ಕೆಲವು ದಿನಗಳ ಮುಂಚೆ ಅವರು ನಡಿಗೆಯಲ್ಲೇ ಬಹು ದೂರ ತೆರಳುತ್ತಿದ್ದರು. ಮೊಪಾರ್ತಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
 

Share this Story:

Follow Webdunia kannada