Webdunia - Bharat's app for daily news and videos

Install App

ಬ್ರಿಟನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯನಿಗೆ ಶಿಕ್ಷೆ

Webdunia
ಗುರುವಾರ, 15 ಡಿಸೆಂಬರ್ 2016 (18:37 IST)
ಬ್ರಿಟನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 23 ವರ್ಷ ವಯಸ್ಸಿನ ಭಾರತೀಯ ನಾಗರಿಕನಿಗೆ ಮೂರು ತಿಂಗಳು ಜೈಲು ವಾಸದ ಶಿಕ್ಷೆಯನ್ನು ನೀಡಲಾಗಿದ್ದು, ಶಿಕ್ಷೆ ಪೂರ್ಣಗೊಳಿಸಿದ ನಂತರ ದುಬೈನಿಂದ ಗಡಿಪಾರು ಮಾಡುವಂತೆ ಕೋರ್ಟ್ ಆದೇಶ ನೀಡಿದೆ. 
 
ಆರೋಪಿಗೆ ಮೂರು ತಿಂಗಳುಗಳ ಕಾಲ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
 
35 ವರ್ಷದ ಬ್ರಿಟನ್ ಮಹಿಳೆಯೊಬ್ಬಳು ಕಿರಾಣಿ ಅಂಗಡಿಯಿಂದ ಕೆಲ ದಿನಸಿ ವಸ್ತುಗಳನ್ನು ಹೋಂ ಡೆಲೆವರಿ ಮಾಡುವಂತೆ ಬುಕ್ ಮಾಡಿದ್ದಳು. ಮನೆಗೆ ಡೆಲಿವರಿ ವಸ್ತುಗಳನ್ನು ತಂದ ಆರೋಪಿ ಆಕೆಯನ್ನು ಹಿಡಿದು ಚುಂಬಿಸಿದ್ದಲ್ಲದೇ ಆಕೆಯನ್ನು ತಬ್ಬಿಹಿಡಿದಿದ್ದ. ನಂತರ ಪೊಲೀಸರಿಗೆ ಕರೆ ಮಾಡುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದರಿಂದ ಆರೋಪಿ ಪರಾರಿಯಾಗಿದ್ದ.
 
ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಆರೋಪಿ, ತಾನು ಯಾವುದೇ ತಪ್ಪು ಮಾಡಿಲ್ಲ. ಮಹಿಳೆಯೇ ನನಗೆ ಮದ್ಯ ಸೇವಿಸುವಂತೆ ಆಹ್ವಾನಿಸಿದ್ದಳು. ಆದರೆ ನಾನು ನಿರಾಕರಿಸಿದಾಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಹೇಳಿಕೆ ನೀಡಿದ್ದಾನೆ.
 
ಫಾರೆನ್ಸಿಕ್ ತಜ್ಞರ ಪ್ರಕಾರ ಮಹಿಳೆಯ ಕತ್ತಿನ ಬಳಿ ಆರೋಪಿಯ ಡಿಎನ್‌ಎ ಪತ್ತೆಯಾಗಿದ್ದರಿಂದ ಇಬ್ಬರ ನಡುವೆ ಸಂಪರ್ಕವಾಗಿದೆ ಎನ್ನುವುದು ಸಾಬೀತಾಗುತ್ತದೆ ಎಂದು ತಿಳಿಸಿದ್ದಾರೆ.
 
ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರೋಪಿಗೆ 15 ದಿನಗಳ ಕಾಲವಕಾಶವಿದೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ