Select Your Language

Notifications

webdunia
webdunia
webdunia
webdunia

ಭಾರತದ ಪರಮಾಣು ಅಸ್ತ್ರ ಹೊತ್ತೊಯ್ಯುವ ರಾಫೆಲ್ ಜೆಟ್ಸ್‌ಗೆ ಬೆದರಿದ ಚೀನಾ, ಪಾಕ್

ಭಾರತದ ಪರಮಾಣು ಅಸ್ತ್ರ ಹೊತ್ತೊಯ್ಯುವ ರಾಫೆಲ್ ಜೆಟ್ಸ್‌ಗೆ ಬೆದರಿದ ಚೀನಾ, ಪಾಕ್
ಬೀಜಿಂಗ್ , ಶುಕ್ರವಾರ, 30 ಸೆಪ್ಟಂಬರ್ 2016 (14:40 IST)
ಭಾರತ ಇತ್ತಿಚೆಗೆ ಖರೀಸಿದ ಪರಮಾಣು ಅಸ್ತ್ರಗಳಿಂದ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ರಾಫೆಲ್ ಜೆಟ್ಸ್‌ಗಳನ್ನು ಚೀನಾ ಮತ್ತು ಪಾಕ್ ಗಡಿಯಲ್ಲಿ ಭಾರತ ನಿಯೋಜಿಸಲಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
 
ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶವಾಗಿದೆ ಎಂದು ಚೀನಾ ಪತ್ರಿಕೆಗಳು ಪ್ರಕಟಿಸಿವೆ.
 
ಭಾರತೀಯ ಸೇನಾಪಡೆಗೆ ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಫೆಲ್‌ ಜೆಟ್ಸ್‌‌ಗಳನ್ನು ಸೇರ್ಪಡೆಗೊಳಿಸಿರುವುದರಿಂದ, ಭಾರತದ ಪರಮಾಣು ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. 
 
ಭಾರತ ಇತ್ತಿಚಗೆ ಫ್ರಾನ್ಸ್‌ನಿಂದ 8.7 ಬಿಲಿಯನ್ ಡಾಲರ್ ವೆಚ್ಚದಲ್ಲಿ 36 ರಾಫೆಲ್ ಜೆಟ್‌ಗಳನ್ನು ಖರೀದಿಸಲಾಗಿದ್ದು, ಪಾಕ್ ಮತ್ತು ಚೀನಾ ದೇಶಗಳ ಮೇಲೆ ದಾಳಿ ಮಾಡಲು ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 
ಚೀನಾ ದೇಶದ ಬೆದರಿಕೆಯಿಂದಾಗಿ ಭಾರತ ಅತಿ ಹೆಚ್ಚು ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ. ಇದರಿಂದ ಏಷ್ಯಾ ವಲಯದಲ್ಲಿ ಶಸ್ತ್ರಾಸ್ತ್ರ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತವಾಯ್ತು, ಪಾಕಿಸ್ತಾನದ ಮೇಲೆ ದಾಳಿ ಮಾಡಿದ ಇರಾನ್ ಸೇನಾಪಡೆ