Webdunia - Bharat's app for daily news and videos

Install App

ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುತ್ತಿರುವುದು ಶಸ್ತ್ರಾಸ್ತ್ರ ಪೈಪೋಟಿಗಲ್ಲ: ಪಾಕ್‌ಗೆ ಅಮೆರಿಕ

Webdunia
ಶನಿವಾರ, 28 ಮೇ 2016 (15:30 IST)
ಭಾರತಕ್ಕೆ ಪರಮಾಣು ಪೂರೈಕೆ ಸಮೂಹಕ್ಕೆ ಸೇರ್ಪಡೆಗೊಳಿಸುವ ಕುರಿತಂತೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೆರಿಕ, ಭಾರತಕ್ಕೆ ಸದಸ್ಯತ್ವ ಸ್ಥಾನ ನೀಡುತ್ತಿರುವುದು ಶಸ್ತ್ರಾಸ್ತ್ರ ಪೈಪೋಟಿ ನಡೆಸಲು ಅಲ್ಲ. ಬದಲಿಗೆ ನಾಗರಿಕ ಬಳಕೆಗಾಗಿ ಉಪಯೋಗಿಸಲು ಎಂದು ಸ್ಪಷ್ಟನೆ ನೀಡಿದೆ.
 
ಇದೊಂದು ಶಸ್ತ್ರಾಸ್ತ್ರ ಪೈಪೋಟಿ ಅಥವಾ ಪರಮಾಣು ಅಸ್ತ್ರಗಳ ಪೈಪೋಟಿಯಲ್ಲ. ಶಾಂತಿಯುತ ನಾಗರಿಕ ಬಳಕೆಗಾಗಿ ಮಾತ್ರ ಉಪಯೋಗಿಸಲಾಗುತ್ತದೆ ಎನ್ನುವುದು ಪಾಕಿಸ್ತಾನಕ್ಕೆ ಅರ್ಥವಾಗುತ್ತದೆ ಎಂದು ಭಾವಿಸುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಮಾರ್ಕ್ ಟೋನರ್ ತಿಳಿಸಿದ್ದಾರೆ.
 
ಭಾರತಕ್ಕೆ ಪರಮಾಣು ಪೂರೈಕೆ ಸಮೂಹಕ್ಕೆ ಸೇರ್ಪಡೆಗೊಳಿಸಿದಲ್ಲಿ ಶಸ್ತ್ರಾಸ್ತ್ರ ಪೈಪೋಟಿಗೆ ನಾಂದಿಯಾಗಲಿದೆ ಎನ್ನುವ  ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟೋನರ್, ಭಾರತ ಪರಮಾಣುವನ್ನು ನಾಗರಿಕರ ಬಳಕೆಗಾಗಿ ಬಳಸುತ್ತದೆಯೇ ಹೊರತು ಇತರ ದೇಶಗಳ ಮೇಲೆ ಯುದ್ಧ ಸಾರಲು ಅಲ್ಲ ಎಂದರು.  
 
ಕಳೆದ 2015ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದ್ದಾಗ, ಭಾರತ ಎನ್‌ಎಸ್‌ಜಿ ಸದಸ್ಯತ್ವ ಹೊಂದುವ ಅರ್ಹತೆ ಪಡೆದಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. 
 
ಪರಮಾಣು ಪೂರೈಕೆ ಸಮೂಹ ಗುಂಪಿಗೆ ಹೊಸ ಸದಸ್ಯರ ಸೇರ್ಪಡೆ ಪ್ರಸ್ತುತವಿರುವ ಸದಸ್ಯರ ಮೇಲೆ ನಿರ್ಭರವಾಗಿರುತ್ತದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಮಾರ್ಕ್ ಟೋನರ್ ಹೇಳಿದ್ದಾರೆ.

\ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ: ಇನ್ನೇನು ಟೇಕ್‌ ಆಫ್‌ ಆಗ್ಬೇಕು ಅನ್ನುಷ್ಟರಲ್ಲೇ ಕುಸಿದು ಬಿದ್ದ ಪೈಲಟ್‌, ತಪ್ಪಿದ ಭಾರೀ ದೊಡ್ಡ ದುರಂತ

ರಜೆ ಕೇಳಿದ್ದಕ್ಕೆ ಮಾಲೀಕ ಗದರಿದ್ದಕ್ಕೆ ಆತನ ಪತ್ನಿ, ಮಗನನ್ನೇ ಕೊಂದ ಕೆಲಸದಾತ

ಅಮರನಾಥ ಯಾತ್ರೆ 2025: ಐದು ಬಸ್‌ಗಳು ಪರಸ್ಪರ ಡಿಕ್ಕಿ, 36ಯಾತ್ರಾರ್ಥಿಗಳಿಗೆ ಗಾಯ

ಆರ್ ಎಸ್ಎಸ್ ಬಗ್ಗೆ ಹುಚ್ಚುತನದ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿ: ಯಡಿಯೂರಪ್ಪ

ದ.ಕನ್ನಡ, ಮದುವೆಯಾಗುವುದಾಗಿ ನಂಬಿಸಿ, ತಾಯಿಯಾಗುವಂತೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ವಶಕ್ಕೆ

ಮುಂದಿನ ಸುದ್ದಿ
Show comments