ಬಾ೦ಗ್ಲಾದೇಶದ ರಾಮಕೃಷ್ಣ ಆಶ್ರಮಕ್ಕೆ ಐಸಿಸ್ ಬೆದರಿಕೆ

Webdunia
ಶನಿವಾರ, 18 ಜೂನ್ 2016 (09:22 IST)
ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ರಾಮಕೃಷ್ಣ ಮಿಷನ್‍‌ಗೆ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್‌ನಿಂದ ಗುರುವಾರ ಬೆದರಿಕೆ ಕರೆ ಬಂದಿದೆ. 

ಆಶ್ರಮ ನಡೆಸುತ್ತಿರುವ ಧಾರ್ಮಿಕ ಪ್ರವಚನಗಳನ್ನು ನಿಲ್ಲಿಸದೇ ಹೋದಲ್ಲಿ ಹತ್ಯೆಗೈಯ್ಯುವುದಾಗಿ ಆಶ್ರಮದ ಸಂತರೋರ್ವರಿಗೆ ಐಸಿಸ್ ಎಚ್ಚರಿಕೆ ನೀಡಿದೆ. 
 
ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಪ್ರಧಾನಿ ಶೇಖ್ ಹಸೀನಾ ಸಂಪೂರ್ಣ ಭದ್ರತೆ ನೀಡುವ ಭರವಸೆಯನ್ನು ನೀಡಿದ್ದಾರೆ. 
 
ಬಾಂಗ್ಲಾ ಇಸ್ಲಾಂ ರಾಷ್ಟ್ರ. ಇಲ್ಲಿ ನಿಮ್ಮ ಧರ್ಮದ ಆರಾಧನೆ ನಡೆಸಬೇಡಿ. ನಿಮ್ಮ ದೇಶಕ್ಕೆ ಹಿಂತಿರುಗಿ. ಇಲ್ಲದಿದ್ದರೆ ಕತ್ತು ಸೀಳಿ ಕೊಲೆಗೈಯ್ಯುತ್ತೇವೆ ಎಂದು ಉಗ್ರರು ಪತ್ರ ಮುಖೇನ ಬೆದರಿಕೆ ಹಾಕಿದ್ದಾರೆ. 
 
ಈ ಕುರಿತು ಮಾಹಿತಿ ಪಡೆದ ಭಾರತದ ವಿದೇಶಾ೦ಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‍ನ ಅಧಿಕಾರಿ, ವಿದೇಶಾ೦ಗ ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ. ನೆರೆ ರಾಷ್ಟ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂದು ಸ್ವರೂಪ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಸ್ತೆ ಮಾಡಿದ್ರೆ ಬಡವರು ಉದ್ದಾರವಾಗಲ್ಲ ಎಂದ ಪರಮೇಶ್ವರ್: ಉದ್ದಾರವಾಯ್ತು ಕನ್ನಡ ನಾಡು ಎಂದ ಅಶೋಕ್

ಇನ್ ಸ್ಟಾಗ್ರಾಂ ಫಾಲೋವರ್ ಸಂಖ್ಯೆ ಹೆಚ್ಚು ಮಾಡೋದು ಹೇಗೆ

ಮುಸ್ಲಿಂ ಮಹಿಳೆಯ ಹಿಜಾಬ್ ಎಳೆದ ಬಿಹಾರ ಸಿಎಂ ನಿತೀಶ್ ಕುಮಾರ್: ವಿಡಿಯೋ ವೈರಲ್

ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಬಂತು ಸ್ಪಷ್ಟ ಸಂದೇಶ

ಸದನಕ್ಕೆ ಟಿ ಶರ್ಟ್ ಧರಿಸಿ ಬರಬೇಡಿ ಎಂದ ಸ್ಪೀಕರ್ ಖಾದರ್: ರಾಹುಲ್ ಗಾಂಧಿ ಹೀಗೇ ಬರ್ತಾರಲ್ವಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments