Webdunia - Bharat's app for daily news and videos

Install App

ಮಾಜಿ ಕ್ರಿಕೆಟಿಗನ ರಹಸ್ಯ ಮರುಮದುವೆ!

Webdunia
ಮಂಗಳವಾರ, 30 ಡಿಸೆಂಬರ್ 2014 (11:26 IST)
ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ, ತೆಹ್ರೀಕ್-ಇ-ಇನ್ಸಾಫ್  ಪಕ್ಷದ ವರಿಷ್ಠ ಇಮ್ರಾನ್ ಖಾನ್ ದೂರದರ್ಶನ ನಿರೂಪಕಿ ರೇಹಾಮ್ ಖಾನ್  ಜತೆ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮುಂದಿನ ತಿಂಗಳು ಔಪಚಾರಿಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ನವೆಂಬರ್ ತಿಂಗಳಲ್ಲಿ  ಖಾನ್ ರೇಹಾಮ್ ಖಾನ್ ಎಂಬ ನಿರೂಪಕಿಯ ಜತೆ  ಇಮ್ರಾನ್ ಖಾನ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದನ್ನು ನಿರಾಕರಿಸಿದ್ದ ಖಾನ್ ಇದು ಕೇವಲ ವದಂತಿ ಎಂದು ಹೇಳಿದ್ದರು. ಆದರೆ ಮತ್ತೆ  ಅವರ ಮದುವೆಯ ಸುದ್ದಿ ಸ್ಥಳೀಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡ ತೊಡಗಿದಾಗ ಖಾನ್ ಮೌನಕ್ಕೆ ಶರಣಾಗಿದ್ದರು. ಪಾಕ್ ಸರಕಾರದ ವಿರುದ್ಧ ಧರಣಿಗಿಳಿದಿದ್ದ ವೇಳೆ ಕ್ರಿಕೆಟಿಗ ತಾವು ನವ ಪಾಕಿಸ್ತಾನದಲ್ಲಿ ಪುರ್ನವಿವಾಹವಾಗುವುದಾಗಿ ಹೇಳಿಕೊಂಡಿದ್ದರು. 
 
ಯಾರೀ ರೇಹಾಮ್ ಖಾನ್!
 
ಖಾನ್ ವರಿಸಿರುವ ನಿರೂಪಕಿ ಪಾಕಿಸ್ತಾನ್ ಮೂಲದ ಬ್ರಿಟಿಷ್ ಪತ್ರಕರ್ತೆ ಎಂದು ತಿಳಿದುಬಂದಿದ್ದು. ಪ್ರಸ್ತುತ ಆಕೆ ಪಾಕ್ ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ.
 
ಇಮ್ರಾನ್ ಖಾನ್ ತಮ್ಮ ಪ್ರಥಮ ಪತ್ನಿ ಜೋಮಿಮಾ ಖಾನ್ ಅವರಿಂದ 2004ರಲ್ಲಿ ಪ್ರತ್ಯೇಕವಾಗಿದ್ದರು. ಆಕೆ ಇಂಗ್ಲೆಂಡ್‌ನ ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಅವರಿಬ್ಬರಿಗೆ ಇಬ್ಬರು ಮಕ್ಕಳಿದ್ದು  ಹಿರಿಯ ಮಗ ಸುಲೈಮಾನ್ 18 ವರ್ಷದವನಾಗಿದ್ದರೆ, ಕಿರಿಯವನಾದ ಕಾಸೀಂಗೆ 15 ರ ಹರೆಯ ಎಂದು ತಿಳಿದು ಬಂದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments