Webdunia - Bharat's app for daily news and videos

Install App

ಮಾಜಿ ಬಿಬಿಸಿ ಪತ್ರಕರ್ತೆ ಕೈ ಹಿಡಿದ ಮಾಜಿ ಕ್ರಿಕೆಟಿಗ

Webdunia
ಶುಕ್ರವಾರ, 9 ಜನವರಿ 2015 (11:52 IST)
ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ, ತೆಹ್ರೀಕ್-ಇ-ಇನ್ಸಾಫ್  ಪಕ್ಷದ ವರಿಷ್ಠ ಇಮ್ರಾನ್ ಖಾನ್  ಪತ್ರಕರ್ತೆ ರೇಹಾಮ್ ಖಾನ್ ಅವರನ್ನು ವಿವಾಹವಾಗಿದ್ದಾರೆ. 
ತಮ್ಮಿಬ್ಬರ ಮದುವೆಯ ವದಂತಿಯನ್ನು ಖಚಿತ ಪಡಿಸಿದ್ದ ಖಾನ್ ಸದ್ಯದಲ್ಲೇ ಶುಭ ಸುದ್ದಿಯನ್ನು ತಿಳಿಸಲಿದ್ದೇವೆ ಎಂದು ಖಾನ್ ಕಳೆದ ವಾರ ಹೇಳಿದ್ದರು. 
 
ಇಸ್ಲಾಮಾಬಾದ್ ಹೊರವಲಯದಲ್ಲಿರುವ ಬನಿ ಗಾಲಾ ಫಾರ್ಮ್‌ಹೌಸ್‌ನಲ್ಲಿ ಗುರುವಾರ ಮುಫ್ತಿ ಸಯೀದ್ ಅವರ ನೇತೃತ್ವದಲ್ಲಿ ನಡೆದ ಸರಳ ಸಮಾರಂಭದಲ್ಲಿ ಖಾನ್ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
 
ಪೇಶಾವರದ ಸೈನಿಕ ಶಾಲೆಯಲ್ಲಿ ಮಕ್ಕಳ ಮೇಲಿನ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಸರಳವಾಗಿ ಮದುವೆ ನಡೆದಿದೆ,'' ಎಂದು ಇಮ್ರಾನ್ ಖಾನ್ ಅವರ ವಕ್ತಾರೆ ಶಿರೀನ್ ಮಜಾರಿ ಟ್ವೀಟ್ ಮಾಡಿದ್ದಾರೆ.
 
''ಅದ್ದೂರಿ ಸಮಾರಂಭವಾಗಲೀ ಔತಣಕೂಟವಾಗಲಿ ಹಮ್ಮಿಕೊಂಡಿಲ್ಲ.ಬಡ ಮಕ್ಕಳಿಗೆ ಅನ್ನದಾನ ಮಾಡಲಾಗುವುದು'', ಎಂದು ಇನ್ನೊಂದು ಟ್ವೀಟ್ ಹೇಳುತ್ತದೆ.
 
ಖಾನ್ ಹಾಗೂ ರೆಹಮ್  ಖಾನ್  ರಹಸ್ಯವಾಗಿ ಮದುವೆಯಾಗಿದ್ದಾರೆ, ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೆಲ ತಿಂಗಳುಗಳಿಂದ ಹರಿದಾಡುತ್ತಿದ್ದವು. 
 
ಮರುಮದುವೆಗೆ ಅವರು ವಿಚ್ಛೇದಿತ ಪತ್ನಿ ಜೆಮಿಮಾ ಖಾನ್ ಅವರ ಅನುಮತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಠಿ  ನೀಡುವಂತೆ ಕಳೆದ ವಾರ ಲಂಡನ್‌ನಲ್ಲಿ ತಮ್ಮ ಮಾಜಿ ಪತ್ನಿ ಮತ್ತು ಮಕ್ಕಳನ್ನು ಖಾನ್ ಭೇಟಿಯಾಗಿದ್ದರು.
 
ಖಾನ್ ವರಿಸಿರುವ ನಿರೂಪಕಿ ಪಾಕಿಸ್ತಾನ್ ಮೂಲದ ಬ್ರಿಟಿಷ್ ಪತ್ರಕರ್ತೆ ಎಂದು ತಿಳಿದುಬಂದಿದ್ದು. ಪ್ರಸ್ತುತ ಅವರು ಡಾನ್ ನ್ಯೂಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಥಮ ಪತಿಯೊಂದಿಗೆ ವಿಚ್ಛೇದನ ಪಡೆದಿರುವ ಆಕೆಗೆ ಮೂವರು ಮಕ್ಕಳಿದ್ದಾರೆ. ಲಿಬಿಯಾದಲ್ಲಿ ಹುಟ್ಟಿದ್ದ ಅವರ ತಂದೆ ಪಾಕಿಸ್ತಾನದ ಮೂಲದವರಾಗಿದ್ದಾರೆ. 
 
ಇಮ್ರಾನ್ ಖಾನ್ ತಮ್ಮ ಪ್ರಥಮ ಪತ್ನಿ ಜೆಮಿಮಾ ಖಾನ್ ಅವರಿಂದ 2004ರಲ್ಲಿ ಪ್ರತ್ಯೇಕವಾಗಿದ್ದರು. ಆಕೆ ಇಂಗ್ಲೆಂಡ್‌ನ ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಅವರಿಬ್ಬರಿಗೆ ಇಬ್ಬರು ಮಕ್ಕಳಿದ್ದು  ಹಿರಿಯ ಮಗ ಸುಲೈಮಾನ್ 18 ವರ್ಷದವನಾಗಿದ್ದರೆ, ಕಿರಿಯವನಾದ ಕಾಸೀಂಗೆ 15 ರ ಹರೆಯ ಎಂದು ತಿಳಿದು ಬಂದಿದೆ. 
 
ಜೆಮಿಮಾ ಮತ್ತು ಇಮ್ರಾನ್‌ ನಡುವೆ 19 ವರ್ಷಗಳ ಅಂತರವಿತ್ತು. ಅವರು ತಮ್ಮ 42ನೇ ವಯಸ್ಸಿನಲ್ಲಿ 21ರ ಹರೆಯದ ಜಮೀಮಾ ಅವರನ್ನು ವರಿಸಿದ್ದರು. ಈಗ ತಮ್ಮ 62 ನೇ ವಯಸ್ಸಿನಲ್ಲಿ 42ರ ಮಹಿಳೆಯ ಜತೆ ಮರುಮದುವೆಯಾಗಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments