Select Your Language

Notifications

webdunia
webdunia
webdunia
webdunia

ಮೂರು ಮಕ್ಕಳ ತಾಯಿಯೊಂದಿಗೆ ಮದುವೆಯನ್ನು ಖಚಿತ ಪಡಿಸಿದ ಮಾಜಿ ಕ್ರಿಕೆಟಿಗ!

ಮೂರು ಮಕ್ಕಳ ತಾಯಿಯೊಂದಿಗೆ ಮದುವೆಯನ್ನು ಖಚಿತ ಪಡಿಸಿದ ಮಾಜಿ ಕ್ರಿಕೆಟಿಗ!
ಲಂಡನ್ , ಮಂಗಳವಾರ, 6 ಜನವರಿ 2015 (12:05 IST)
ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ಹಾಲಿ ರಾಜಕಾರಣಿ, ತೆಹ್ರೀಕ್-ಇ-ಇನ್ಸಾಫ್  ಪಕ್ಷದ ವರಿಷ್ಠ ಇಮ್ರಾನ್ ಖಾನ್ ದೂರದರ್ಶನ ನಿರೂಪಕಿ ರೇಹಾಮ್ ಖಾನ್ ಜತೆ ಮದುವೆಯಾಗಲಿರುವ ಕುರಿತ ವರದಿಯನ್ನು ಸತ್ಯವೆಂದು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಶುಭ ಸುದ್ದಿಯನ್ನು ತಿಳಿಸಲಿದ್ದೇವೆ ಎಂದು ಖಾನ್ ಹೇಳಿದ್ದಾರೆ. 
ಈ ಕುರಿತು ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ಅವರು ಔಪಚಾರಿಕ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
 
ಲಂಡನ್ ವಿಮಾನ್ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಖಾನ್, ತಮ್ಮ ಮರುಮದುವೆಯ ಸುದ್ದಿ ವಾಸ್ತವವಾದದ್ದು,  ನಾನೇನನ್ನೂ ಮುಚ್ಚಿಡಲು ಬಯಸುವುದಿಲ್ಲ ಎಂದಿದ್ದಾರೆ.
 
ಕಳೆದ ಶನಿವಾರ ತಮ್ಮ ಮಾಜಿ ಪತ್ನಿ ಮತ್ತು ಅವರ ಮಕ್ಕಳನ್ನು ಭೇಟಿ ಮಾಡಲು ಅವರು ಲಂಡನ್‌ಗೆ ಹೋಗಿದ್ದರು. ತಮ್ಮ ವಿಚ್ಛೇದಿತ ಪತ್ನಿ ಜೆಮಿಮಾ ಖಾನ್ ಅವರ ಅನುಮತಿ ಪಡೆದು ಖಾನ್ ಮತ್ತೊಂದು ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  
 
ನವೆಂಬರ್ ತಿಂಗಳಲ್ಲಿ  ಖಾನ್ ರೇಹಾಮ್ ಖಾನ್ ಎಂಬ ನಿರೂಪಕಿಯ ಜತೆ  ಇಮ್ರಾನ್ ಖಾನ್ ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದನ್ನು ನಿರಾಕರಿಸಿದ್ದ ಖಾನ್ ಇದು ಕೇವಲ ವದಂತಿ ಎಂದು ಹೇಳಿದ್ದರು. ಆದರೆ ಮತ್ತೆ  ಅವರ ಮದುವೆಯ ಸುದ್ದಿ ಸ್ಥಳೀಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡ ತೊಡಗಿದಾಗ ಖಾನ್ ಮೌನಕ್ಕೆ ಶರಣಾಗಿದ್ದರು. ಪಾಕ್ ಸರಕಾರದ ವಿರುದ್ಧ ಧರಣಿಗಿಳಿದಿದ್ದ ವೇಳೆ ಕ್ರಿಕೆಟಿಗ ತಾವು ನವ ಪಾಕಿಸ್ತಾನದಲ್ಲಿ ಪುರ್ನವಿವಾಹವಾಗುವುದಾಗಿ ಹೇಳಿಕೊಂಡಿದ್ದರು. 
 
ಯಾರೀ ರೇಹಾಮ್ ಖಾನ್!
 
ಖಾನ್ ವರಿಸಿರುವ ನಿರೂಪಕಿ ಪಾಕಿಸ್ತಾನ್ ಮೂಲದ ಬ್ರಿಟಿಷ್ ಪತ್ರಕರ್ತೆ ಎಂದು ತಿಳಿದುಬಂದಿದ್ದು. ಪ್ರಸ್ತುತ ಅವರು ಡಾನ್ ನ್ಯೂಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಒಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಪ್ರಥಮ ಪತಿಯೊಂದಿಗೆ ವಿಚ್ಛೇದನ ಪಡೆದಿರುವ ಆಕೆಗೆ ಮೂವರು ಮಕ್ಕಳಿದ್ದಾರೆ. ಲಿಬಿಯಾದಲ್ಲಿ ಹುಟ್ಟಿದ್ದ ಅವರ ತಂದೆಯಾಟಿ ಪಾಕಿಸ್ತಾನದ ಮೂಲದವರಾಗಿದ್ದಾರೆ. 
 
ಇಮ್ರಾನ್ ಖಾನ್ ತಮ್ಮ ಪ್ರಥಮ ಪತ್ನಿ ಜೆಮಿಮಾ ಖಾನ್ ಅವರಿಂದ 2004ರಲ್ಲಿ ಪ್ರತ್ಯೇಕವಾಗಿದ್ದರು. ಆಕೆ ಇಂಗ್ಲೆಂಡ್‌ನ ಅತ್ಯಂತ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದಾಳೆ. ಅವರಿಬ್ಬರಿಗೆ ಇಬ್ಬರು ಮಕ್ಕಳಿದ್ದು  ಹಿರಿಯ ಮಗ ಸುಲೈಮಾನ್ 18 ವರ್ಷದವನಾಗಿದ್ದರೆ, ಕಿರಿಯವನಾದ ಕಾಸೀಂಗೆ 15 ರ ಹರೆಯ ಎಂದು ತಿಳಿದು ಬಂದಿದೆ. 
 
ಜೆಮಿಮಾ ಮತ್ತು ಇಮ್ರಾನ್‌ ನಡುವೆ 19 ವರ್ಷಗಳ ಅಂತರವಿತ್ತು. ಅವರು ತಮ್ಮ 42ನೇ ವಯಸ್ಸಿನಲ್ಲಿ 21ರ ಹರೆಯದ ಜಮೀಮಾ ಅವರನ್ನು ವರಿಸಿದ್ದರು. ಈಗ ತಮ್ಮ 62 ನೇ ವಯಸ್ಸಿನಲ್ಲಿ ಮರುಮದುವೆಯಾಗುತ್ತಿದ್ದಾರೆ. 

Share this Story:

Follow Webdunia kannada