Select Your Language

Notifications

webdunia
webdunia
webdunia
webdunia

ಏಲಿಯನ್ಸ್‌ಗಳಿಂದ ಸಾಮೂಹಿಕ ಅತ್ಯಾಚಾರ: 18 ಬಾರಿ ಗರ್ಭಿಣಿ

ಏಲಿಯನ್ಸ್‌ಗಳಿಂದ ಸಾಮೂಹಿಕ ಅತ್ಯಾಚಾರ: 18 ಬಾರಿ ಗರ್ಭಿಣಿ
ಇಟಲಿ , ಮಂಗಳವಾರ, 21 ಫೆಬ್ರವರಿ 2017 (10:56 IST)
ಏಲಿಯನ್ಸ್‌ಗಳ ಅಸ್ತಿತ್ವದ ಬಗ್ಗೆ ಬಗೆಬಗೆಯ ಚರ್ಚೆಗಳಾಗುತ್ತಲೆ ಇವೆ. ಮತ್ತೀಗ ಇಟಲಿಯ ಮಹಿಳೆಯೋರ್ವರು  ಏಲಿಯನ್ಸ್‌ ಕುರಿತಂತೆ ಬೆಚ್ಚಿಬೀಳಿಸುವ ಸಂಗತಿಯನ್ನು ಹೊರಹಾಕಿದ್ದಾರೆ.
44 ವರ್ಷದ ಗಿಯೋವನ್ನಾ ತನ್ನ ಮೇಲೆ ಏಲಿಯನ್ಸ್‌ಗಳು ಅನೇಕ ಬಾರಿ ಸಾಮೂಹಿಕ ಅತ್ಯಾಚಾರವೆಸಗಿವೆ ಎಂದು ವಾದಿಸುತ್ತಿದ್ದಾರೆ.
 
ಹೌದು, ಏಲಿಯನ್ಸ್ ಇರುವಿಕೆ ಬಗ್ಗೆಯೇ ಇನ್ನು ಖಚಿತತೆಗೆ ಬರಲಾಗಿಲ್ಲ. ಆದರೆ ಗಿಯೋವನ್ನಾ ತಾನು ಬಾಲಕಿ ಇದ್ದಾಗ ಏಲಿಯನ್ಸ್‌ಗಳಿಂದ ಅಪಹರಣಕ್ಕೊಳಗಾಗಿದ್ದೆ. ಅವರು ನನ್ನ ಮೇಲೆ ಅನೇಕ ಬಾರಿ ಸಾಮೂಹಿಕ ಅತ್ಯಾಚಾರವೆಸಗಿ 18 ಬಾರಿ ಗರ್ಭಿಣಿಯಾಗುವಂತೆ ಮಾಡಿದ್ದವು.ಐದು ವರ್ಷಗಳ ಹಿಂದೆ ಗರ್ಭ ಧರಿಸಿರುವ ಲಕ್ಷಣಗಳು ಗೋಚರಿಸಿದಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಹೊಟ್ಟೆಯಲ್ಲಿರುವ ಮಗುವಿನ ಹೃದಯ ಬಡಿತ ವೈದ್ಯರಿಗೆ ಕೇಳಿಸಿತು, ಆದರೆ ಸ್ಕಾನಿಂಗ್‌ನಲ್ಲಿ ಮಗು ಕಾಣಿಸಲಿಲ್ಲ ಎಂದಿದ್ದಾರೆ.
 
ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣದಿಂದ ತನಗಾಗುತ್ತಿರುವ ಹಿಂಸೆಯನ್ನು ಕೊನೆಗಾಣಿಸಲು ಆಕೆ ಗರ್ಭಪಾತ ಮಾಡಿಕೊಂಡಳು. ಗರ್ಭಪಾತ ಸಂಪೂರ್ಣ ದೃಶ್ಯಾವಳಿಗಳನ್ನು ಚಿತ್ರೀಕರಿಸಲಾಯ್ತು. ಭ್ರೂಣ ಅನ್ಯಗೃಹ ಜೀವಿಯನ್ನೇ ಹೋಲುತ್ತಿತ್ತು ಎಂದಾಕೆ ಹೇಳಿದ್ದಾಳೆ
 
ಆಕೆ ಹೇಳುವ ಪ್ರಕಾರ ನಾಲ್ಕು ವರ್ಷದ ಪ್ರಾಯದಲ್ಲಿ ಆಕೆಯನ್ನು ಅನ್ಯಗೃಹಜೀವಿಗಳು ಅಪಹರಿಸಿದ್ದವು. 18 ಬಾರಿ ಆಕೆ ಈ ರೀತಿಯಲ್ಲಿ ಗರ್ಭಪಾತ ಮಾಡಿಸಿಕೊಂಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಬಣ್ಣಗಳಲ್ಲಿ ಟಿವಿಎಸ್ ವೇಗೋ