ವಾಷಿಂಗ್ಟನ್ : ಡಿಸ್ನಿ ಪ್ಲಸ್ ತನ್ನ ಸೇವೆಗಳನ್ನು ಹೊಸದಾಗಿ 50ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಾಗಿಸಲಿದೆ ಎಂದು ಬುಧವಾರ ತಿಳಿಸಿದೆ.
ವರ್ಷದ ದ್ವಿತೀಯಾರ್ಧದಲ್ಲಿ ಡಿಸ್ನಿ 42 ದೇಶಗಳಲ್ಲಿ ಹಾಗೂ 11 ಪ್ರಾಂತ್ಯಗಳಲ್ಲಿ ತನ್ನ ಸೇವೆಗಳನ್ನು ಹೊಸದಾಗಿ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.
ಡಿಸ್ನಿ ಹೊಸದಾಗಿ ಪ್ರಾರಂಭಿಸಲಿರುವ ದೇಶಗಳ ಪಟ್ಟಿ – ಅಲ್ಬೇನಿಯಾ, ಅಲ್ಜೀರಿಯಾ, ಅಂಡೋರಾ, ಬಹ್ರೇನ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಬಲ್ಗೇರಿಯಾ, ಕ್ರೋಯೇಷಿಯಾ, ಜೆಕಿಯಾ, ಈಜಿಪ್ಟ್, ಎಸ್ಟೋನಿಯಾ, ಗ್ರೀಸ್, ಹಂಗೇರಿ, ಇರಾಕ್, ಇಸ್ರೇಲ್, ಜೋರ್ಡಾನ್, ಕೊಸೊವೊ, ಕುವೈತ್, ಲಾಟ್ಟಿಯಾ, ಲೆಬನಾನ್, ಲಿಬಿಯಾ, ಲಿಚ್ಟೆನ್ಸ್ಟೈನ್, ಲಿಥುವೇನಿಯಾ,
ಮಾಲ್ಟಾ, ಮಾಂಟೆನೆಗ್ರೊ, ಮೊರಾಕೊ, ಉತ್ತರ ಮ್ಯಾಸಿಡೋನಿಯಾ, ಓಮನ್, ಪ್ಯಾಲೆಸ್ಟೈನ್, ಪೋಲೆಂಡ್, ಕತಾರ್, ರೋಮೇನಿಯಾ, ಸ್ಯಾನ್ ಮರಿನೋ, ಸೌದಿ ಅರೇಬಿಯಾ, ಸೆರ್ಬಿಯಾ, ಸ್ಲೋವಾಕಿಯಾ, ಸ್ಲೋವೇನಿಯಾ, ದಕ್ಷಿಣ ಆಫ್ರಿಕಾ, ಟುನೀಶಿಯಾ, ಟರ್ಕಿ, ಯುನೈಟಡ್ ಅರಬ್ ಎಮಿರೇಟ್ಸ್, ವ್ಯಾಟಿಕನ್ ಎಮಿರೇಟ್ಸ್ ಹಾಗೂ ಯೆಮನ್ ದೇಶಗಳು ಸೇರಿವೆ.