Select Your Language

Notifications

webdunia
webdunia
webdunia
webdunia

ಮಹಿಳೆಯರನ್ನು ಶಿಕ್ಷಿಸಲು ಐಸಿಸ್ ಬಳಸುವ ಲೋಹದ ಉಪಕರಣ ಬೈಟರ್

ಮಹಿಳೆಯರನ್ನು  ಶಿಕ್ಷಿಸಲು ಐಸಿಸ್  ಬಳಸುವ ಲೋಹದ ಉಪಕರಣ ಬೈಟರ್
ಮೊಸುಲ್ , ಗುರುವಾರ, 25 ಫೆಬ್ರವರಿ 2016 (14:13 IST)
ಮೊಸುಲ್ ಜನರು ಅದನ್ನು ಬೈಟರ್ ಅಥವಾ ಕ್ಲಿಪರ್ ಎಂದು ಕರೆಯುತ್ತಾರೆ. ತಮ್ಮ ದೇಹವನ್ನು ಸಂಪೂರ್ಣ ಮುಚ್ಚಿಕೊಳ್ಳದೇ ಅರೆಬರೆ ತೆರೆದಿರುವ ಮಹಿಳೆಯರಿಗೆ ಲೋಹದ ಉಪಕರಣವೊಂದರ ಮೂಲಕ ಶಿಕ್ಷೆ ನೀಡುವ ವಿಧಾನವನ್ನು ಐಸಿಸ್ ಪರಿಚಯಿಸಿದ್ದು, ಐಸಿಸ್ ಬರ್ಬರತೆ, ಕ್ರೌರ್ಯಕ್ಕೆ ಸಾಕ್ಷಿಯಾಗುತ್ತದೆ. ಶಾಲೆಯ ಮಾಜಿ ನಿರ್ದೇಶಕಿ ಈ ತಿಂಗಳು ನಗರದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ದೇಹದ ಮಾಂಸಖಂಡಗಳು ಕಿತ್ತುಬರುವಂತೆ ಅಸಹನೀಯ ನೋವನ್ನು ಉಂಟುಮಾಡುವ ಉಪಕರಣ ಇದಾಗಿದೆ.
 
 ಅನೇಕ ವಿಫಲ ಯತ್ನಗಳ ನಂತರ 22 ವರ್ಷ ವಯಸ್ಸಿನ ಗೃಹಿಣಿ ಫಾತಿಮಾ ಮೊಸುಲ್‌ನಿಂದ ಅಂತಿಮವಾಗಿ ತಪ್ಪಿಸಿಕೊಂಡಿದ್ದಾರೆ. ಫಾತಿಮಾ ಮಕ್ಕಳು ಹಸಿವಿನಿಂದ ನರಳುತ್ತಿದ್ದವು ಮತ್ತು ಐಸಿಸ್ ಕೂಡ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಹಿಳೆಯರಿಗೆ ವಿಕೃತ ಮತ್ತು ಹಿಂಸಾತ್ಮಕ ವರ್ತನೆ ತೋರಿಸಿತ್ತೆಂದು ಅವರು ಹೇಳುತ್ತಾರೆ.
 ಬೈಟರ್ ಉಪಕರಣ ನಮಗೆ ದುಃಸ್ವಪ್ನವಾಗಿತ್ತು ಎಂದು ನಿರಾಶ್ರಿತರಿಗೆ ಮೀಸಲಾದ ಮಾಬ್ರೌಕಾ ಶಿಬಿರಕ್ಕೆ ಸುರಕ್ಷಿತವಾಗಿ ಹಿಂತಿರುಗಿದ ಫಾತಿಮಾ ಹೇಳಿದ್ದಾರೆ.

ನನ್ನ ಸೋದರಿ ಮನೆಯಲ್ಲೇ ಕೈಗವಸು ಬಿಟ್ಟುಬಂದಿದ್ದರಿಂದ ಅವಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿದ್ದರೆಂದು ಫಾತಿಮಾ ಹೇಳಿದ್ದಾರೆ. ಮಹಿಳೆಯರು ಪೂರ್ಣವಾಗಿ ಬುರ್ಖಾ ಧರಿಸಬೇಕು. ಸಡಿಲವಾದ ಬಟ್ಟೆ, ಸಾಕ್ಸ್ ಮತ್ತು ಗ್ಲೋವ್ಸ್ ಧರಿಸಬೇಕು. ಮನೆಯಿಂದ ಹೊರಗೆ ಹೋಗುವಾಗ ಪುರುಷ ಸಂಬಂಧಿ ಅವರ ಜತೆಗೂಡಬೇಕು ಎಂದು ಐಸಿಸ್ ಕಟ್ಟಾಜ್ಞೆ ಮಾಡಿತ್ತು.
ತನ್ನ ಸೋದರಿಗೆ ಈ ಲೋಹದ ಉಪಕರಣದ ಶಿಕ್ಷೆಯ ಬಳಿಕ ಅವಳ ಕೈಯಲ್ಲಿ ಗಾಯದ ಗುರುತುಗಳು ಹಾಗೇ ಉಳಿದಿದ್ದವು.

ಹೆರಿಗೆಯ ನೋವಿಗಿಂತ ಬೈಟರ್ ಶಿಕ್ಷೆ ಯಾತನಾಮಯವಾಗಿರುತ್ತದೆ ಎಂದು ಫಾತಿಮಾ ಹೇಳಿದ್ದಾರೆ. ಈ ಬೈಟರ್ ಪ್ರಾಣಿಗಳ ನ್ನು ಸೆರೆಹಿಡಿಯುವ ಟ್ರಾಪ್ ರೀತಿಯಲ್ಲಿ ಅಥವಾ ಲೋಹದ ದವಡೆ ರೀತಿಯಲ್ಲಿ ಮಾಂಸವನ್ನು ಕೀಳುತ್ತದೆ ಎಂದು ಇತರೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 
 

Share this Story:

Follow Webdunia kannada