Select Your Language

Notifications

webdunia
webdunia
webdunia
webdunia

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಬಿಟ್ಟ ಹಿಂದೂಗಳು ವಾಪಸ್ : ಇಮ್ರಾನ್ ಖಾನ್

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಬಿಟ್ಟ ಹಿಂದೂಗಳು ವಾಪಸ್ : ಇಮ್ರಾನ್ ಖಾನ್
ಇಸ್ಲಾಮಾಬಾದ್ , ಮಂಗಳವಾರ, 21 ಅಕ್ಟೋಬರ್ 2014 (15:11 IST)
ಪಾಕಿಸ್ತಾನದಲ್ಲಿ ತಮ್ಮ ಪಕ್ಷ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ)  ಅಧಿಕಾರಕ್ಕೇರಿದರೆ, ಅವ್ಯಾಹತವಾಗಿ ನಡೆಯುತ್ತಿರುವ ಶೋಷಣೆಯನ್ನು ತಡೆಯಲಾಗದೆ ದೇಶ ತೊರೆದಿರುವ ಅಲ್ಪ ಸಂಖ್ಯಾತ ಹಿಂದೂಗಳನ್ನು ಮರಳಿ ಕರೆತರುವುದಾಗಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಹೇಳಿದ್ದಾರೆ.

ಪ್ರಧಾನಿ ನವಾಜ್ ಶರೀಫ್ ಉಚ್ಚಾಟನೆ ಕೋರಿ ಆಗಸ್ಟ್ 14 ರಿಂದ ಪಾಕ್ ಸಂಸತ್ತಿನ ಎದುರು ಪ್ರತಿಭಟನಾ ನಿರತರಾಗಿರುವ ಖಾನ್ ದಿನಚರಿಯಂತೆ  ಕಳೆದ ಭಾನುವಾರ ರಾತ್ರಿ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡುತ್ತ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಅಧಿಕಾರಕ್ಕೆ ಬಂದರೆ ದೌರ್ಜನ್ಯ ತಾಳಾಲಾರದೆ ಪಾಕಿಸ್ತಾನದಿಂದ ಪಲಾಯನ ಮಾಡಿದ್ದ ಹಿಂದೂ ಸಮುದಾಯದ ಜನರು, ಹಿಂತಿರುಗಿ ಬರುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
 
ಬಲವಂತ ಧರ್ಮಪರಿವರ್ತನೆಗಳ ಕುರಿತು ಮಾತನಾಡಿದ ಖಾನ್ "  ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡವನ್ನು ಎದುರಿಸಿದ ಹಿಂದೂಗಳು ಮತ್ತು ಕಲಾಷ್ ಸಮುದಾಯವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಬಲವಂತದ ಮತಾಂತರವನ್ನು ನಮ್ಮ ಧರ್ಮ ವಿರೋಧಿಸುತ್ತದೆ"  ಎಂದು  ಹೇಳಿದರು.
 
"ಮುಸ್ಲಿಮರು ತಮ್ಮ ಒಳ್ಳೆಯ ನಡತೆ ಮೂಲಕ ಧರ್ಮ ಪ್ರಸಾರ ಮಾಡಬೇಕು ಮತ್ತು ಶಕ್ತಿ ಪ್ರಯೋಗದ ಮೂಲಕವಲ್ಲ. ಪಾಕಿಸ್ತಾನ ನಿರ್ಮಾತೃ ಮಹಮದ್ ಅಲಿ ಜಿನ್ನಾ ಅವರ ಕನಸಿನಂತೆ ತಮ್ಮ ಪಕ್ಷ ಅಲ್ಪ ಸಂಖ್ಯಾತರಿಗೆ ರಕ್ಷಣೆ, ನ್ಯಾಯ ಮತ್ತು ಸಮಾನತೆಯ ಹಕ್ಕುಗಳನ್ನು ನೀಡಲು  ಬದ್ಧವಾಗಿದೆ" ಎಂದು ಅವರು ಆಶ್ವಾಸನೆ ನೀಡಿದರು
 
ಪ್ರತಿಭಟನೆಯ 67ನೇ ದಿನದಂದು ತಮ್ಮ ಬೆಂಬಲಿಗರನ್ನು ಸಂಬೋಧಿಸುತ್ತಿದ್ದ ಅವರು "ನಾವು ದುರ್ಬಲರ ಕಲ್ಯಾಣಕ್ಕೆ ಮತ್ತು ಅವರಿಗೆ ರಕ್ಷಣೆ ನೀಡಲು ಸದಾ ತತ್ಪರರಾಗಿದ್ದೇವೆ" ಎಂದರು. 
 
ಸಂವಿಧಾನದ ಅವೆನ್ಯೂದಲ್ಲಿ ಅವರು "ಅಲ್ಪಸಂಖ್ಯಾತರು ದಿನವನ್ನು ಆಚರಿಸಿದರು. ಕ್ರಿಶ್ಚಿಯನ್, ಹಿಂದು ಮತ್ತು ಸಿಖ್ ಸಮುದಾಯದ ಪ್ರತಿನಿಧಿಗಳು ಆ ಸಂದರ್ಭದಲ್ಲಿ ಉಪಸ್ಥಿತರಿದ್ದರು .ಹಿಂದುಗಳ  ಜೊತೆಯಲ್ಲಿ ಅವರ ಪಕ್ಷದವರು ದೀಪಾವಳಿಯನ್ನು ಸಹ ಆಚರಿಸಿದರು. 

Share this Story:

Follow Webdunia kannada