ಢಾಕಾ: ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂಗೆ ಗೌರವ ತೋರದ ಪೋಸ್ಟ್ ಪ್ರಕಟವಾದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಬ್ರಹ್ಮನ್ ಬರಿಯಾ ಜಿಲ್ಲೆಯಲ್ಲಿ ಉದ್ರಿಕ್ತ ದುಷ್ಕರ್ಮಿಗಳ ಗುಂಪೊಂದು 15 ದೇವಾಲಯಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ನೂರಾರು ಹಿಂದೂಗಳ ಮನೆಯನ್ನು ಲೂಟಿ ಮಾಡಿದ್ದಾರೆ.
ಬಾಂಗ್ಲಾದಲ್ಲಿ ವಾಸವಾಗಿರುವ ವ್ಯಕ್ತಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂಗೆ ಗೌರವ ತೋರದಿರುವ ಪೋಸ್ಟ್ ಹಾಕಿದ್ದನು. ಅದನ್ನು ನೋಡಿದ ಸ್ಥಳೀಯ ದುಷ್ಕರ್ಮಿಗಳ ಗುಂಪೊಂದು ಕೈಯ್ಯಲ್ಲಿ ಶಸ್ತ್ರ ಹಿಡಿದು ಅಲ್ಲಿರುವ ಹದಿನೈದು ದೇವಾಲಯಗಳ ಮೇಲೆ ಆಕ್ರಮಣ ನಡೆಸಿದೆ. ದೇವಸ್ಥಾನದ ಪ್ರಾಂಗಣದೊಳಗೆಲ್ಲ ನುಗ್ಗಿ ವಿದ್ವಂಸಕ ಕೃತ್ಯ ಎಸಗಿದೆ. ಗರ್ಭಗುಡಿಯಲ್ಲಿರುವ ಏಳೆಂಟು ವಿಗ್ರಹಗಳನ್ನು ಹಾನಿ ಮಾಡಿದ್ದಾರೆ. ಸಾಲದೆಂಬಂತೆ ಹಿಂದುಗಳ ಮನೆಯೊಳಗೂ ನುಗ್ಗಿ, ಹಣ, ಬಂಗಾರ ಹಾಗೂ ಇನ್ನಿತರ ಉಪಯುಕ್ತ ವಸ್ತುಗಳನ್ನು ಲೂಟಿ ಮಾಡಿದೆ.
ಈ ದುರ್ಘಟನೆ ಸಂಬಂಧಿಸಿ ಪೊಲೀಸರು ಸಾವಿರಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಫೇಸ್ ಬುಕ್ ನಲ್ಲಿ ಮುಸ್ಲಿಮರ ಪವಿತ್ರ ಸ್ಥಳವನ್ನು ಲೇವಡಿ ಮಾಡಿದ ಹಿನ್ನೆಲೆಯಲ್ಲಿ ನೂರಾರು ಮುಸ್ಲಿಂ ಯುವಕರು ಈ ದಾಳಿ ನಡೆಸಿದ್ದಾರೆ ಎಂದು ನಸೀರ್ ನಗರ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ